Welcome To Kannada News Today

ಸಣ್ಣ ಮತ್ತು ಮಧ್ಯಮ ವೃತ್ತಿಪರರಿಗೆ ಆನ್ಲೈನ್ ಸಾರ್ವಜನಿಕ ಸಂಪರ್ಕ ಸೇವೆ ಆರಂಭಸಿದ ರಾಕಾ ಪಿಆರ್

Started Online Public Relations Service for Small and Medium Professionals by Raka PR Online

🌐 Kannada News :

Kannada News Today

ಭಾರತದಲ್ಲಿ ಮೊದಲ ಬಾರಿಗೆ ಮುಂಬೈ ಮೂಲದ ರಾಕಾ ರೆಪುಟೇಷನ್ ಕಂಪನಿ ವತಿಯಿಂದ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಅನುಕೂಲಕ್ಕಾಗಿ ರಾಕಾ ಪಿಆರ್ ಆನ್ಲೈನ್  ವಚ್ರ್ಯುವಲ್ ಪಬ್ಲಿಕ್ ರಿಲೇಶನ್ಸ್ ಸೇವೆಯನ್ನು ಇಂದು ಪರಿಚಯಿಸಿದೆ.

ಈ ಸೇವೆಯನ್ನು ಆನ್‍ಲೈನ್ ಮತ್ತು ಆಫ್ ಲೈನ್ ನಲ್ಲಿ ದೇಶದ 81 ನಗರಗಳು, 18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಚಯಿಸಲಾಗಿದೆ. ಬೃಹತ್ ಮಹಾನಗರಗಳು, ಸಣ್ಣ ನಗರಗಳು, ಪ್ರಾದೇಶಿಕ ಮಾರುಕಟ್ಟೆಗಳು ಸೇರಿಕೊಂಡಂತೆ ಭಾರತಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳ ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದ್ದು ಉದ್ಯಮಿಗಳಿಗೆ ಉನ್ನತ ಮಟ್ಟದ ತಂತ್ರಜ್ಞಾನವನ್ನು ಅವರ ಅಗತ್ಯಕ್ಕೆ ತಕ್ಕಂತೆ ಒದಗಿಸಲಿದೆ.

ಭಾರತಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ನಿಜವಾಗಿಯೂ ವರದಾನವಾಗಲಿದೆ. ಕೆಲವು ಉದ್ದಿಮೆದಾರರು ಹೆಚ್ಚು ವೆಚ್ಚ, ಭೌಗೋಳಿಕ ತೊಂದರೆ ಮತ್ತು ಸಂಕೀರ್ಣವಾದ ಪ್ರಕ್ರಿಯೆಯ ಕಾರಣದಿಂದ ಪಿಆರ್ ಸೇವೆಯನ್ನು ಅಳವಡಿಸಿಕೊಳ್ಳುವುದಿಲ್ಲ. ಹಾಗಾಗಿ ಇತರೆ ನಗರಗಳ ಮಾರುಕಟ್ಟೆಗಳನ್ನು ತಲುಪುವುದು ಕಷ್ಟವಾಗಿತ್ತು. ಆದರೆ, ತಂತ್ರಜ್ಞಾನದ ಕೃಪೆಯಿಂದ ಅದು ಈಗ ಸಾಧ್ಯವಾಗಿದೆ. ಪಿಆರ್ ಸೇವೆಯಲ್ಲಿರುವ ಬಹುತೇಕರು ನಿರಂತರ ಸೇವೆಯನ್ನುಗ್ರಾಹಕರಿಗೆ ಒದಗಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ದೇಶದ ಬಹುತೇಕ ಸಾರ್ವಜನಿಕ ಸಂಪರ್ಕ (ಪಿಆರ್) ಕಂಪನಿಗಳು ಮುಂಬೈ ಮತ್ತು ದೆಹಲಿಗೆ ಮಟ್ಟಕ್ಕೆ ಸೀಮಿತವಾಗಿವೆ. ಆದ್ದರಿಂದ ಗ್ರಾಹಕರು ಅವರಿಂದ ಸಣ್ಣ ಪ್ರಮಾಣದ ಪಿಆರ್ ಸೇವೆ ಪಡೆಯಬಹುದು ಎನ್ನುವುದನ್ನು ಪರಿಗಣಿಸಲು ಆಗುವುದಿಲ್ಲ ಎಂದು ರಾಕಾ ರೆಪುಟೇಶನ್‍ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ ಬಹಲ ಹೇಳಿದರು.

Web Title : Started Online Public Relations Service for Small and Medium Professionals, By Raka PR Online

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.