“ನಮ್ಮ ವಿಜಯಪುರ ನಮ್ಮ ಹೆಮ್ಮೆ” ಐತಿಹಾಸಿಕ ನಗರಿ ವಿಜಯಪುರ ವೀಕ್ಷಣೆ ಕೇವಲ ರೂಪಾಯಿ ದರದಲ್ಲಿ

historic city of Vijayapura view only at the rupee

“ನಮ್ಮ ವಿಜಯಪುರ ನಮ್ಮ ಹೆಮ್ಮೆ” ಐತಿಹಾಸಿಕ ನಗರಿ ವಿಜಯಪುರ ವೀಕ್ಷಣೆ ಕೇವಲ ರೂಪಾಯಿ ದರದಲ್ಲಿ – historic city of Vijayapura view only at the rupee – Kannada News Today

ವಿಜಯಪುರ : ಆದಿಲ್ ಶಾಹಿ ಸಾಮ್ರಾಜ್ಯದ ವೈಭವವನ್ನು ಕಣ್ತುಂಬಿಕೊಂಡು ಅದ್ಭುತ ವಾಸ್ತುಶಿಲ್ಪವನ್ನು ಕಂಡು ಪ್ರವಾಸದ ಮಜಾ ಅನುಭವಿಸಬೇಕೆಂದರೆ ಐತಿಹಾಸಿಕ ನಗರ ವಿಜಾಪುರಕ್ಕೆ ಬರಬೇಕು ಇಲ್ಲಿ ನೂರಾರು ಸ್ಮಾರಕಗಳು ಒಂದೊಂದು ಕಥೆಯನ್ನು ಹೇಳುವಂಥವುಗಳು.

ಇಂಥ ಐತಿಹಾಸಿಕ ನಗರಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಹಿಂದೆ ಪ್ರತಿ ಸ್ಮಾರಕ ನೋಡಲು ಹೋಗಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಧಾವಿಸಲು ತುಂಬಾ ಹಣ ಖರ್ಚು ಮಾಡಬೇಕಾಗಿತ್ತು. ಆದರೆ ಈಗ ಕೇವಲ ನೂರು ರೂಪಾಯಿ ದರದಲ್ಲಿ ವಿಜಯಪುರ ಪ್ರವಾಸಿ ಸ್ಥಳಗಳ ವೀಕ್ಷಿಸಬಹುದು.
ಹೌದು ಈ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇವಲ ಒಂದು ನೂರು ರೂಪಾಯಿ ದರದಲ್ಲಿ ವಿಜಯಪುರ ನಗರ ಪ್ರಮುಖ ಐತಿಹಾಸಿಕ ಸ್ಮಾರಕಗಳ ಪಟ್ಟಿಗೆ ಸೇರಿದ ಗೋಲ್ ಗುಂಬಜ್, ಜಮಿಯ ಮಸೀದಿ, ಕಪ್ಪು ತಾಜ್ ಮಹಲ್ ಎಂದೇ ಪ್ರಸಿದ್ಧವಾದ ಇಬ್ರಾಹಿಂ ರೋಜಾ, ಮಲಿಕ್ ಎ ಮೈದಾನ ತೋಪು, ಬಾರಾ ಕಮಾನ್ಹಾಗೂ ಶಿವಗಿರಿಯ ಪರಶಿವನ ಮೂರ್ತಿಯನ್ನು ನೋಡುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೆ ಎಸ್ ಟಿ ಡಿ ಸಿ ವತಿಯಿಂದ ಮಾಡಲಾಗಿದೆ.

ಜೊತೆಗೆ ಎಸಿ ಬಸ್ಸು ಹಾಗೂ ಪ್ರವಾಸಿ ಮಾರ್ಗದರ್ಶಿ ಸೇವಾ ಮಾಹಿತಿ ಕೂಡ ಇದೆ. ಇದರ ಉಪಯೋಗವನ್ನು ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಸದುಪಯೋಗಪಡಿಸಿಕೊಳ್ಳಬೇಕು. ಇದರ ಬುಕ್ಕಿಂಗ್ ಗಾಗಿ ಶ್ರೀ ಸರ್ದಾರ್ ಜಾದವ್(9741050984) ಪ್ರವಾಸಿ ಮಾರ್ಗದರ್ಶಿ ಅವರನ್ನು ಸಂಪರ್ಕಿಸಬಹುದು///