RRR ಮತ್ತು 'KGF2'. ದೇಶದ ಗಡಿದಾಟಿ ದೊಡ್ಡ ಯಶಸ್ಸನ್ನು ಕಂಡಿವೆ.
RRR ಮತ್ತು KGF 2 ಕಳೆದ ಕೆಲವು ದಿನಗಳಿಂದ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಕೇಳಿಬರುತ್ತಿರುವ ಹೆಸರುಗಳು
ಇದುವರೆಗೆ ಆರ್ಆರ್ಆರ್ ಸಿನಿಮಾ ವಿಶ್ವಾದ್ಯಂತ 1100 ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಆರ್ಆರ್ಆರ್ ಸಿನಿಮಾ ಹಿಂದಿಯಲ್ಲಿ ಬಿಡುಗಡೆಗೊಂಡು ನಾಲ್ಕು ವಾರಕ್ಕೆ 258 ಕೋಟಿ ಕಲೆಕ್ಷನ್ ಮಾಡಿದೆ.
'ಕೆಜಿಎಫ್ 2' ಹಿಂದಿಯಲ್ಲಿ ಕೇವಲ 11 ದಿನಗಳಲ್ಲಿ 300 ಕೋಟಿ ಕಲೆಕ್ಷನ್ ಮಾಡಿ RRR ಸಿನಿಮಾವನ್ನು ಹಿಂದಿಕ್ಕಿದೆ.
ಹಿಂದಿಯಲ್ಲಿ, RRR ತಿಂಗಳಿಗೆ 258 ಕೋಟಿ ಕಲೆಕ್ಷನ್ ಮಾಡಿದರೆ, 'KGF2' ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 300 ಕೋಟಿ ಕಲೆಕ್ಷನ್ ಮಾಡಿದೆ.
ಇನ್ನೂ 'ಕೆಜಿಎಫ್ 2' ಸದ್ಯ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಈ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟಾರೆ 'ಕೆಜಿಎಫ್ 2' ಬಾಲಿವುಡ್ನಲ್ಲಿ ಕಲೆಕ್ಷನ್ನಲ್ಲಿ RRR ಗಿಂತ ದೊಡ್ಡ ಹಿಟ್ ಆಗಿದೆ. ಬೇರೆ ಯಾವ ಸಿನಿಮಾ ಸಹ ಇದಕ್ಕೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.
ನಮ್ಮ ಸೌತ್ ಸಿನಿಮಾಗಳು ಬಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ನಮ್ಮ ಚಿತ್ರಗಳ ಪೈಪೋಟಿ ಬಾಲಿವುಡ್ ಸಮುದಾಯವನ್ನು ಇನ್ನಷ್ಟು ಚಿಂತೆ ಮೂಡಿಸಿದೆ.
Click To Read More
STORIES
Kannada News