ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೆಸರು ಮಾಡಿರೋ ಯಶ್ ಗೆ ಸದ್ಯ ದೇಶದ ಗಡಿದಾಟಿ ಅಭಿಮಾನಿಗಳಿದ್ದಾರೆ, ಭಾಷೆಯ ಸೀಮಿತವಲ್ಲದ ಅಭಿಮಾನಿಗಳಿದ್ದಾರೆ

ನಾಯಕ ಯಶ್ 'ಕೆಜಿಎಫ್' ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಅವರ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸಕ್ಸಸ್ ಕಂಡಿತ್ತು.

ಚಿತ್ರದಲ್ಲಿ ಯಶ್ ಸತಿಮಣಿ ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಹೇಶ್ ರಾವ್ ನಿರ್ದೇಶಿಸಿದ್ದಾರೆ.

ಪದ್ಮಾವತಿ ಪಿಕ್ಚರ್ಸ್ ವತಿಯಿಂದ ತೆಲುಗಿನಲ್ಲಿ ‘ರಾರಾಜು’ ಎಂಬ ಶೀರ್ಷಿಕೆಯಡಿ ಚಿತ್ರ ಬಿಡುಗಡೆಯಾಗುತ್ತಿದೆ.

ಚಿತ್ರವು ‘ರೊಮ್ಯಾಂಟಿಕ್ ಆಕ್ಷನ್’ ಎಂದು ನಿರ್ಮಾಪಕ ವಿ.ಎಸ್.ಸುಬ್ಬರಾವ್ ಈ ಸಂದರ್ಭದಲ್ಲಿ ತಿಳಿಸಿದರು. ನಾಯಕ ಯಶ್ ಮತ್ತು ಅವರ ಪತ್ನಿ ಒಟ್ಟಿಗೆ ನಟಿಸಿದ್ದಾರೆ.

'ಕೆಜಿಎಫ್' ನಂತರ ಟಾಲಿವುಡ್ ನಲ್ಲೂ ಯಶ್ ಕ್ರೇಜ್ ಹೆಚ್ಚಾಯಿತು. 

ಅದರೊಂದಿಗೆ ಈ ಚಿತ್ರವನ್ನು ‘ರಾರಾಜು’ ಹೆಸರಿನಲ್ಲಿ ತೆಲುಗು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದಿದ್ದಾರೆ ನಿರ್ಮಾಪಕರು.

ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ ಎಂಬ ಮಾಹಿತಿಯನ್ನೂ ಸಹ ನೀಡಿದ್ದಾರೆ.

ಕಿಕ್ ಶ್ಯಾಮ್, ಸೀತಾ, ರವಿಶಂಕರ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

Click To Read More STORIES