RRR ಸಿನಿಮಾ ತನ್ನ ಕಲೆಕ್ಷನ್ ಬೇಟೆಯನ್ನು ಮುಂದುವರೆಸಿದೆ, ಬಿಡುಗಡೆಯಾಗಿ 7 ವಾರ ಆದರೂ ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ, ಚಿತ್ರದ ಸದ್ಯದ ಕಲೆಕ್ಷನ್ ಮತ್ತು ವಿಶ್ವದಾದ್ಯಂತ ಎಷ್ಟು ಗಳಿಸಿದ ವಿವರ ನೋಡಿ.

ಟಾಲಿವುಡ್‌ನ ಮೋಸ್ಟ್ ಪ್ರೆಸ್ಟಿಜಿಯಸ್ ಮೂವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘RRR’ ಬಿಡುಗಡೆಗೂ ಮುನ್ನವೇ ಎಂತಹ ಹೈಪ್ ಕ್ರಿಯೇಟ್ ಆಗಿತ್ತು ಎಂಬುದು ನಮಗೆಲ್ಲ ಗೊತ್ತೇ ಇದೆ. 

ಸ್ಟಾರ್ ಡೈರೆಕ್ಟರ್ ರಾಜಮೌಳಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.. ಯಂಗ್ ಟೈಗರ್ ಎನ್ ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಒಟ್ಟಿಗೆ ನಟಿಸಿದ್ದಾರೆ.

RRR ಅಂತಿಮವಾಗಿ ಮಾರ್ಚ್ 25 ರಂದು ಬಿಡುಗಡೆಯಾಯಿತು, ಇದು ಪ್ರಪಂಚದಾದ್ಯಂತದ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ. ಎಲ್ಲೆಡೆ ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆಯಿತು.

ಮಾರ್ಚ್ 25ರಂದು ಆರಂಭವಾದ RRR ದಾಖಲೆಗಳ ಬೇಟೆ ತಿಂಗಳಾದರೂ ನಿಂತಿಲ್ಲ. ಈ ಚಿತ್ರ ಈಗಾಗಲೇ ವಿಶ್ವದಾದ್ಯಂತ 1100 ಕೋಟಿ ರೂಪಾಯಿ ಗಳಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. 

ಈ ಸಿನಿಮಾದಲ್ಲಿ ಚರಣ್ ಅಲ್ಲೂರಿ ಸೀತಾರಾಮರಾಜನ ಪಾತ್ರದಲ್ಲಿ ಮತ್ತು ಕೊಮುರಂ ಭೀಮನ ಪಾತ್ರದಲ್ಲಿ ಜೂನಿಯರ್ NTR ಪವರ್ ಪ್ಯಾಕ್ಡ್ ಅಭಿನಯವಿದೆ. ಚಿತ್ರವು 7ನೇ ವಾರಕ್ಕೆ ಕಾಲಿಡುತ್ತಿದೆ.

ಚಿತ್ರ ಇದುವರೆಗೆ ವಿಶ್ವದಾದ್ಯಂತ 1,127 ಕೋಟಿ ರೂಪಾಯಿ ಗಳಿಸಿದೆ ಮತ್ತು ಷೇರು ಆದಾಯದಲ್ಲಿ 605.78 ಕೋಟಿ ರೂಪಾಯಿಗಳ ಮ್ಯಾಜಿಕ್ ಫಿಗರ್ ಅನ್ನು ಮುಟ್ಟಿದೆ.

ಸದ್ಯದಲ್ಲೇ ಒಟಿಟಿಯಲ್ಲಿ ಸಿನಿಮಾವನ್ನು ಸ್ಟ್ರೀಮ್ ಮಾಡಲು ಚಿತ್ರತಂಡ ಸಿದ್ಧವಾಗಿದ್ದು, ಒಟ್ಟು ರನ್‌ನಲ್ಲಿ ಚಿತ್ರ ಎಷ್ಟು ಗಳಿಕೆ ಮಾಡಲಿದೆ ಎಂಬ ಕುತೂಹಲ ಮೂಡಿದೆ.

Click To Read More STORIES