ಬಾಕ್ಸ್ ಆಫೀಸ್ ದೂಳೆಬ್ಬಿಸಿದ `RRR', ಸಾವಿರ ಕೋಟಿ ಕಲೆಕ್ಷನ್ ಕಡೆಗೆ ಮುನ್ನುಗ್ಗಿದೆ, ದಿನದಿಂದ ದಿನಕ್ಕೆ ಚಿತ್ರದ ದಾಖಲೆ ಏರುಗತಿಯಲ್ಲಿದೆ.

ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.

ಈಗಾಗಲೇ ರಾಜಮೌಳಿ ಸಿನಿಮಾ RRR Movie 800 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ, ಸಿನಿಮಾ ಟಾಲಿವುಡ್‌ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ. 

ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ 2.0 ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 800 ಕೋಟಿ ರೂ ಬಾಚಿಕೊಂಡಿತ್ತು. ಇದೀಗ ಕೇವಲ 9 ದಿನದಲ್ಲಿಯೇ ಈ ದಾಖಲೆಯನ್ನು ‘ಆರ್​ಆರ್​ಆರ್’ ಮುರಿದಿದೆ. 

ಈ ಹಿಂದೆ ತೆರೆಕಂಡಿದ್ದ ಬಾಹುಬಲಿ ಹಾಗೂ ಬಾಹುಬಲಿ 2 ಸಿನಿಮಾಗಳಿಗಿಂತ ಆರ್​ಆರ್​ಆರ್​ ಸಿಕ್ಕಾಪಟ್ಟೆ ಹೆಸರು ಮಾಡಿದೆ, ಗಳಿಕೆಯಲ್ಲೂ ಎಲ್ಲ ಸಿನಿಮಾಗಳ ದಾಖಲೆ ಮುರಿದಿದೆ..

ಮೂರನೇ ವಾರದ ಪ್ರಾರಂಭದಲ್ಲಿ ‘ಆರ್​ಆರ್​ಆರ್​’ 1000 ಕೋಟಿ ಕ್ಲಬ್ ಸೇರಬಹುದು. ಎರಡನೇ ವಾರದಲ್ಲಿ ಶುಕ್ರವಾರ ಸುಮಾರು 41 ಕೋಟಿ ಹಾಗೂ ಶನಿವಾರ 68.18 ಕೋಟಿಯನ್ನು ಚಿತ್ರ ಗಳಿಸಿದೆ. 

ಪ್ರಸ್ತುತ 800 ಕೋಟಿ ಕ್ಲಬ್ ಸೇರಿರುವ ‘ಆರ್​ಆರ್​ಆರ್’ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಗಳಿಸಿದ ಸಾರ್ವಕಾಲಿಕ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

Click Read More Stories