ಗಂಟೆಗಟ್ಟಲೆ ಮೊಬೈಲ್‌ನಲ್ಲಿ ವಿಡಿಯೋ ಗೇಮ್‌ ಆಡುತ್ತಿದ್ದ ಬಾಲಕನಿಗೆ ‘ಹೃದಯಾಘಾತ’

death from online game : 12 ವರ್ಷದ ಬಾಲಕ ಗಂಟೆಗಳ ಕಾಲ ಆನ್‌ಲೈನ್ ಆಟವಾಡಿ 'ಹೃದಯಾಘಾತ' ಸಾವು

ವಿರಾಮವಿಲ್ಲದೆ ಸತತವಾಗಿ ಆನ್‌ಲೈನ್ ಆಟವಾಡಿ ಕೊನೆಗೆ ಹೃದಯಾಘಾತದಿಂದ 12 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ವರದಿಯ ಪ್ರಕಾರ, 12 ವರ್ಷದ ಬಾಲಕ ವಿರಾಮವಿಲ್ಲದೆ ಸುಮಾರು ಗಂಟೆಗಳ ಕಾಲ ಆನ್‌ಲೈನ್ ವಿಡಿಯೋ ಗೇಮ್ ‘ಪಬ್ಜಿ’ ಆಡುತ್ತಿದ್ದ ಎನ್ನಲಾಗಿದೆ.

( Kannada News ) ಆನ್‌ಲೈನ್ ವಿಡಿಯೋ ಗೇಮ್ ಮುಗ್ದ ಬಾಲಕನ ಸಾವಿಗೆ ಕಾರಣ ಆಯಿತು. ಈ ಪ್ರಕರಣ ಈಜಿಪ್ಟ್‌ ನಲ್ಲಿ ನಡೆದಿದ್ದು, ಗಂಟೆಗಟ್ಟಲೆ ಮೊಬೈಲ್‌ನಲ್ಲಿ ವಿಡಿಯೋ ಗೇಮ್‌ ಆಡುತ್ತಿದ್ದ ಬಾಲಕನಿಗೆ ‘ಹೃದಯಾಘಾತ’ ವಾಗಿ ಮೃತಪಟ್ಟಿದ್ದಾನೆ. ಈಜಿಪ್ಟ್ ಇಂಡಿಪೆಂಡೆಂಟ್ ವರದಿಯ ಪ್ರಕಾರ, 12 ವರ್ಷದ ಬಾಲಕ ವಿರಾಮವಿಲ್ಲದೆ ಗಂಟೆಗಳ ಕಾಲ ಆನ್‌ಲೈನ್ ವಿಡಿಯೋ ಗೇಮ್ ‘ಪಬ್ಜಿ’ ಆಡುತ್ತಿದ್ದ. 

ಈ ಸಮಯದಲ್ಲಿ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಪೋಷಕರು ಮಗುವಿನ ಕೋಣೆಗೆ ಹೋಗಿ ನೋಡಿದಾಗ, ಬಾಲಕ ಪ್ರಜ್ಞಾಹೀನನಾಗಿರುವುದನ್ನು ಕಂಡು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. 

ಆಸ್ಪತ್ರೆಗೆ ತಲುಪುವ ಮುನ್ನ ನಿಧನ

ಮಗುವನ್ನು ಪೋರ್ಟ್ ಸಯೀದ್‌ನ ಅಲ್-ಸಲಾಮ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಗೆ ತಲುಪುವ ಮುನ್ನ ಬಾಲಕ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿ ಖಚಿತಪಡಿಸಿದ್ದಾರೆ. ಮಗು ವಿರಾಮ ತೆಗೆದುಕೊಳ್ಳದೆ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದು ಅದುವೇ ಹೃದಯಾಘಾತಕ್ಕೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.

Web Title : 12-year-old death from online game
Scroll Down To More News Today