ಚೀನಾ ಬೆಂಕಿ ಅವಘಡ 18 ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ 20 ಕ್ಕೂ ಹೆಚ್ಚು ಸಾವು

18 firefighters and a local forest farm worker Killed in Massive Forest Fire in China

ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಬೃಹತ್ ಬೆಂಕಿಯಲ್ಲಿ 19 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 18 ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಸ್ಥಳೀಯ ಅರಣ್ಯ ಕೃಷಿ ಕೆಲಸಗಾರರು ಸೇರಿದ್ದಾರೆ.

ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕಾಡಿನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯನ್ನು ನಂದಿಸುವಾಗ ಹದಿನೆಂಟು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಓರ್ವ ಕೃಷಿ ಕೆಲಸಗಾರ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ. 

ಸೋಮವಾರ ಮಧ್ಯಾಹ್ನ 3.51 ಗಂಟೆಗೆ ಸ್ಥಳೀಯ ಕಾಡಿನ ಪಕ್ಕದ ಜಮೀನಿನಲ್ಲಿ ಬೆಂಕಿ ಪ್ರಾರಂಭವಾಯಿತು ಮತ್ತು ಬಲವಾದ ಗಾಳಿಯಿಂದಾಗಿ ಹತ್ತಿರದ ಕಾಡಿನ ಪ್ರದೇಶಕ್ಕೆ ಬೇಗನೆ ಹರಡಿತು ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತಪಟ್ಟವರಲ್ಲಿ 18 ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಅರಣ್ಯ ಕೃಷಿ ಕೆಲಸಗಾರರು ಸೇರಿದ್ದಾರೆ. ಗಾಳಿ ಬೀಸುವ ದಿಕ್ಕಿನಲ್ಲಿ ಹಠಾತ್ ಬದಲಾವಣೆಯಿಂದಾಗಿ ಅವರು ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. 

300 ಕ್ಕೂ ಹೆಚ್ಚು ವೃತ್ತಿಪರ ಅಗ್ನಿಶಾಮಕ ದಳ ಸಿಬ್ಬಂದಿಗಳನ್ನೂ ಮತ್ತು 700 ಸೇನಾಪಡೆಗಳನ್ನು ಸ್ಥಳಕ್ಕೆ ಸಹಾಯಕ್ಕಾಗಿ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ, ಬೆಂಕಿಯ ಕಾರಣ ತನಿಖೆ ಹಂತದಲ್ಲಿದೆ.

Scroll Down To More News Today