ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸೇರಿದಂತೆ ಐವರು ಸಾವು
ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ ಸಂಚಲನ ಮೂಡಿಸಿದೆ. ಉತ್ತರ ಕೆರೊಲಿನಾದಲ್ಲಿ (North Carolina), ಬಂದೂಕುದಾರಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮೃತರಲ್ಲಿ ಒಬ್ಬ ಪೋಲೀಸರೂ ಸೇರಿದ್ದಾರೆ. ಇದೇ ವೇಳೆ ಆರೋಪಿ ಇನ್ನೂ ಸಿಕ್ಕಿಲ್ಲ, ಸದ್ಯ ಗ್ಯಾರೇಜ್‌ನಲ್ಲಿ ತಲೆಮರೆಸಿಕೊಂಡಿದ್ದು, ಪೊಲೀಸರು ಯುವಕನನ್ನು ಸುತ್ತುವರಿದಿದ್ದಾರೆ.
5 Dead In Shooting In North Carolina Suspect Contained
The Raleigh Police Department is currently on the scene of an active shooting in the area of the Neuse River Greenway near Osprey Cove Drive and Bay Harbor Drive.
Residents in that area are advised to remain in their homes.
— Raleigh Police (@raleighpolice) October 13, 2022