Welcome To Kannada News Today

ಕೊರೋನಾ ಭೀತಿ ನಡುವೆಯೂ, ನೀಲಿ ಚಿತ್ರ ವೀಕ್ಷಣೆಗೇನೂ ಕಮ್ಮಿಯಿಲ್ಲ. ಭಾರತದಲ್ಲಿ ಶೇ. 95 ಹೆಚ್ಚಳ

95 per cent increases viewing porn Videos, report released by PornHub

🌐 Kannada News :

ಸಿಂಗಾಪುರ : ಸರಿಹೋಯ್ತು, ಕೊರೋನಾ… ಕೊರೋನಾ … ಕೊರೋನಾ .. ಭೀತಿಯಿಂದಲೇ ಜನರು ಮನೆಗಳಲ್ಲಿ ಬಂದಿಯಾಗಿದ್ದಾರೆ. ಈ ನಡುವೆ ಗ್ರಹ ಬಂಧನದಲ್ಲಿರುವ ಜನರ ಪೋರ್ನ್ ವೀಕ್ಷಣೆ ಶೇಕಡಾ ೯೫ ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವದ ಕೋಟ್ಯಂತರ ಜನರನ್ನು ಗೃಹಬಂಧನಕ್ಕೆ ಒಳಪಡಿಸಿದ ಮೇಲೆ ಹಲವಾರು ದೇಶಗಳಲ್ಲಿ ಕಾಂಡೋಮ್‌ಗಳ ಮಾರಾಟ ಹೆಚ್ಚಾಗಿದೆ ಎಂಬ ಮಾಹಿತಿಗಳ ಬೆನ್ನಲ್ಲೇ, ಇದೀಗ ಜನರು ಪೋಲಿ ಚಿತ್ರಗಳ ವೀಕ್ಷಣೆಗೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದಾರೆ ಎಂಬಾ ಸುದ್ದಿ ಹೊರಬಿದ್ದಿದೆ.

ಹೌದು, ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಇದೀಗ ಪೋರ್ನ್ ಮಾತು, ನೀಲಿ ಚಿತ್ರಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ, ಕೊರೋನಾ ವೈರಸ್ ಸೋಂಕಿತ ಬಹುತೇಕ ಎಲ್ಲಾ ದೇಶಗಳಲ್ಲೂ ಲಾಕ್‌ಡೌನ್‌ ನ ಈ ಅವಧಿಯಲ್ಲಿ ನೀಲಿಚಿತ್ರಗಳ ವೀಕ್ಷಣೆ ಭರ್ಜರಿ ಏರಿಕೆ ಕಂಡಿದೆ ಎಂಬ ಸುದ್ದಿಯನ್ನು ‘ಪೋರ್ನ್‌ಹಬ್‌’ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಭಾರತದಲ್ಲಿ ನೀಲಿ ಚಿತ್ರ ವೀಕ್ಷಣೆ ಪ್ರಮಾಣ ಶೇ.95ರಷ್ಟು ಏರಿದೆ ಎಂದು ವರದಿ ತಿಳಿಸಿದೆ.

ಇನ್ನು ಲಾಕ್‌ಡೌನ್‌ ಅವಧಿಯಲ್ಲಿ ಇತರ ದೇಶಗಳಾದ ಫ್ರಾನ್ಸ್‌ನ ನೀಲಿ ಚಿತ್ರ ವೀಕ್ಷಣೆ ಶೇ.40, ಜರ್ಮನಿ ಶೇ.25, ಇಟಲಿ ಶೇ.55, ರಷ್ಯಾ ಶೇ.56, ಸ್ಪೇನ್‌ ಶೇ.60, ಸ್ವಿಜರ್ಲೆಂಡ್‌ ಶೇ.25ರಷ್ಟುವೀಕ್ಷಣೆ ಪ್ರಮಾಣ ಏರಿಕೆಯಾಗಿದೆ ಎಂದು ನೀಲಿಚಿತ್ರಗಳ ಸೇವೆ ನೀಡುವ ವಿಶ್ವದ ಅತಿದೊಡ್ಡ ಪೋರ್ಟಲ್‌ ಆಗಿರುವ ಪೋರ್ನ್‌ಹಬ್‌ ಮಾಹಿತಿ ಬಹಿರಂಗ ಪಡಿಸಿದೆ..

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile