ಅಫ್ಘಾನಿಸ್ತಾನ ಪೊಲೀಸ್ ಅಧಿಕಾರಿ ಕಣ್ಣುಕಿತ್ತ ಕಿಡಿಗೇಡಿಗಳು

ಕಾಬೂಲ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಿಯೋಜಿಸಲ್ಪಟ್ಟ 33 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಲಾಗಿದೆ - Afghan woman working as cop shot blinded

ಅಫ್ಘಾನಿಸ್ತಾನ ಪೊಲೀಸ್ ಅಧಿಕಾರಿ ಕಣ್ಣುಕಿತ್ತ ಕಿಡಿಗೇಡಿಗಳು

( Kannada News Today ) : ಕಾಬೂಲ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಿಯೋಜಿಸಲ್ಪಟ್ಟ 33 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಲಾಗಿದೆ.

ಖತೇರಾ ಅವರನ್ನು ಮೂರು ತಿಂಗಳ ಹಿಂದೆ ಅಫ್ಘಾನಿಸ್ತಾನ ಪೊಲೀಸ್ ಠಾಣೆಯ ಅಪರಾಧ ಶಾಖೆಯಲ್ಲಿ ಮಹಿಳಾ ಅಧಿಕಾರಿಯಾಗಿ ನೇಮಿಸಲಾಗಿತ್ತು.

ಅಫ್ಘಾನಿಸ್ತಾನ ಪೊಲೀಸ್ ಅಧಿಕಾರಿ ಕಣ್ಣುಕಿತ್ತ ಕಿಡಿಗೇಡಿಗಳು - Kannada News

ಕೆಲಸದಿಂದ ಹಿಂದಿರುಗುವಾಗ ಬೈಕ್‌ನಲ್ಲಿದ್ದ ಮೂವರು ಖತೇರಾ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡು ಹಾರಿಸಿ ಕಣ್ಣಿಗೆ ಇರಿದಿದ್ದಾರೆ. ಅಧಿಕಾರಿ ಖತೇರಾ ಅವರು ತಮ್ಮ ಕಣ್ಣು ಕಳೆದುಕೊಂಡಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆಯ ಮೇಲೆ ಘಟನೆಯ ಹೊಣೆಯನ್ನು ಸ್ಥಳೀಯ ಆಡಳಿತ ಮಂಡಳಿ ಹೊರಿಸಿದೆ.

ಈ ಸುದ್ದಿ ಓದಿ : ಬೆಂಗಳೂರು : ಬಾಡಿಗೆ ಕೊಟ್ಟಿಲ್ಲವೆಂದು ಮಹಿಳೆಗೆ ಚೂರಿ ಇರಿದ ಮನೆಯೊಡತಿ

ಆಸ್ಪತ್ರೆಯಲ್ಲಿ ಎಚ್ಚರಗೊಂಡ ಖತೇರಾಗೆ ಏನೂ ಕಾಣಿಸಲಿಲ್ಲ. ಆ ಬಗ್ಗೆ ಅವರೇ ಹೇಳಿದಂತೆ “ನಾನು ವೈದ್ಯರನ್ನು ಕೇಳಿದೆ, ಯಾಕೆ ನನಗೆ ಏನನ್ನೂ ನೋಡಲಾಗುತ್ತಿಲ್ಲ? ಗಾಯಗಳಿಂದಾಗಿ ನನ್ನ ಕಣ್ಣುಗಳಿಗೆ ಇನ್ನೂ ಬ್ಯಾಂಡೇಜ್ ಆಕಿದೆ ಎಂದು ಅವರು ಹೇಳಿದರು. ಆದರೆ ಆ ಕ್ಷಣದಲ್ಲಿ, ನನ್ನ ಕಣ್ಣುಗಳನ್ನು ನನ್ನಿಂದ ಕಿತ್ತುಕೊಳ್ಳಲಾಗಿದೆ ಎಂದು ನನಗೆ ತಿಳಿದಿತ್ತು, ”ಎಂದು ಅವರು ಹೇಳಿದರು, ಈ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

Web Title : Afghan woman working as cop shot blinded

Follow us On

FaceBook Google News

Read More News Today