ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಭಾರತಕ್ಕೆ ಪತ್ರ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ.

- - - - - - - - - - - - - Story - - - - - - - - - - - - -
  • ಬಾಂಗ್ಲಾದೇಶ ಶೇಖ್ ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಮನವಿ.
  • ಶೇಖ್ ಹಸೀನಾರನ್ನು ಢಾಕಾಗೆ ಹಸ್ತಾಂತರಿಸಲು ಭಾರತದೊಂದಿಗೆ ಮಾತುಕತೆ.
  • ಶೇಖ್ ಹಸೀನಾ ಅವರು ಕಳೆದ ಆಗಸ್ಟ್ 5 ರಿಂದ ಭಾರತದಲ್ಲಿ ನೆಲೆಸಿದ್ದಾರೆ.

ನವದೆಹಲಿ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶದ (Bangladesh) ಹಂಗಾಮಿ ಸರ್ಕಾರ ಇಂದು ಭಾರತಕ್ಕೆ ಪತ್ರ ಬರೆದಿದೆ. 77 ವರ್ಷದ ಹಸೀನಾ ಕಳೆದ ಆಗಸ್ಟ್ 5 ರಿಂದ ಭಾರತದಲ್ಲಿ ನೆಲೆಸಿದ್ದಾರೆ.

ಬಾಂಗ್ಲಾದೇಶದಲ್ಲಿ ತನ್ನ ಸರ್ಕಾರದ ವಿರುದ್ಧ ಪ್ರತಿಭಟನೆಯ ನಂತರ ಹಸೀನಾ ದೇಶವನ್ನು ತೊರೆದರು. ಢಾಕಾ ಮೂಲದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಶೇಖ್ ಹಸೀನಾ ಜೊತೆಗೆ ಆಕೆಯ ಮಂತ್ರಿಗಳು, ಸಲಹೆಗಾರರು ಮತ್ತು ಮಾಜಿ ಸೇನಾಧಿಕಾರಿಗಳಿಗೆ ಬಂಧನ ವಾರಂಟ್ ಹೊರಡಿಸಿದೆ.

ಹಸೀನಾ ಹತ್ಯಾಕಾಂಡದಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ಮಾತನಾಡಿ, ಭಾರತವು ರಾಜತಾಂತ್ರಿಕವಾಗಿ ಶೇಖ್ ಹಸೀನಾರನ್ನು ಢಾಕಾಗೆ ವಿಚಾರಣೆ ಎದುರಿಸಲು ಕಳುಹಿಸಲು ವಿನಂತಿಸಿದೆ.

ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಭಾರತಕ್ಕೆ ಪತ್ರ

ಹಸೀನಾ ಅವರ ಹಸ್ತಾಂತರ ಪತ್ರವನ್ನು ಢಾಕಾದಲ್ಲಿರುವ ವಿದೇಶಾಂಗ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಗೃಹ ಸಲಹೆಗಾರ ಜಹಾಂಗೀರ್ ಆಲಂ ಹೇಳಿದ್ದಾರೆ.

Bangladesh Requests Extradition of Sheikh Hasina to India

Related Stories