ಸಂಚಾರ ನಿಯಮ ಉಲ್ಲಂಘಿಸಿದ ಯುವಕನ ಮೇಲೆ 60 ಬಾರಿ ಗುಂಡು ಹಾರಿಸಿದ ಪೊಲೀಸರು!
ಇತ್ತೀಚೆಗಷ್ಟೇ ಕಪ್ಪು ಬಣ್ಣದ ಯುವಕನೊಬ್ಬ ಕಾರಿನಲ್ಲಿ ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿದ್ದ. ಆತನನ್ನು ಬೆನ್ನಟ್ಟಿದ ಪೊಲೀಸರು ಯುವಕನ ಮೇಲೆ 60 ಬಾರಿ ಗುಂಡು ಹಾರಿಸಿದ್ದಾರೆ
ಸೂಪರ್ ಪವರ್ ಅಮೆರಿಕದಲ್ಲಿ ಕಪ್ಪು ಜನರ ಮೇಲಿನ ದ್ವೇಷ ಇನ್ನೂ ಮುಂದುವರಿದಿದೆ. ಇತ್ತೀಚೆಗಷ್ಟೇ ಕಪ್ಪು ಬಣ್ಣದ ಯುವಕನೊಬ್ಬ ಕಾರಿನಲ್ಲಿ ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿದ್ದ. ಆತನನ್ನು ಬೆನ್ನಟ್ಟಿದ ಪೊಲೀಸರು ಯುವಕನ ಮೇಲೆ 60 ಬಾರಿ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಬಾಡಿ ಕ್ಯಾಮ್ ವಿಡಿಯೋ ನೋಡಿದ ವಕೀಲರು ಇದನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ಪ್ರಸ್ತುತ ಆಡಳಿತಾತ್ಮಕ ರಜೆಯಲ್ಲಿದ್ದಾರೆ ಮತ್ತು ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ವಕೀಲರು ತಿಳಿಸಿದ್ದಾರೆ. ಜೈಲ್ಯಾಂಡ್ ವಾಕರ್ ಎಂಬ 25 ವರ್ಷದ ಕಪ್ಪು ವ್ಯಕ್ತಿ ಓಹಿಯೋದಲ್ಲಿ ಚಾಲನೆ ಮಾಡುವಾಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಬೆನ್ನಟ್ಟಿದ ಪೊಲೀಸರು 60 ಬಾರಿ ಗುಂಡು ಹಾರಿಸಿದ್ದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ವಕೀಲರು ಬಹಿರಂಗಪಡಿಸಿದ್ದಾರೆ.
black man shot 60 times by police for violating traffic rules
Follow us On
Google News |