ಟ್ರಂಪ್ ರ್ಯಾಲಿಯಲ್ಲಿ ಪಾಲ್ಗೊಂಡ 9 ಜನರಿಗೆ ಕೊರೊನಾ ಪಾಸಿಟಿವ್

( Kannada News ) : ವಾಷಿಂಗ್ಟನ್ (ಯುಎಸ್ಎ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರ್ಯಾಲಿಯಲ್ಲಿ ಭಾಗವಹಿಸಿದ 9 ಜನರಿಗೆ ಕೋವಿಡ್ -19 ಸೋಂಕು ತಗುಲಿದೆ. ಸೆಪ್ಟೆಂಬರ್ 18 ರಂದು ಅಮೆರಿಕದದಲ್ಲಿ ನಡೆದ ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದರು, ಟ್ರಂಪ್ ಜೊತೆಗೆ ರ್ಯಾಲಿಯಲ್ಲಿ ಭಾಗವಹಿಸಿದ 9 ಜನರಿಗೆ ಕೊರೊನಾ ಪಾಸಿಟಿವ್ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ನಿರ್ದೇಶಕ ಕ್ರಿಸ್ ಎಹ್ರೆಸ್ಮನ್ ಹೇಳಿದ್ದಾರೆ. ನಡೆದ ರ್ಯಾಲಿಯಲ್ಲಿ 2 ಸಾವಿರ ಜನರು ಭಾಗವಹಿಸಿದ್ದರು.

ಫ್ಲೋರಿಡಾದ ಸ್ಯಾನ್ ಫೋರ್ಡ್ ನಲ್ಲಿ ರ್ಯಾಲಿಯನ್ನು ನಡೆಸುವುದಾಗಿ ಟ್ರಂಪ್ ಟ್ವಿಟ್ಟರ್ ನಲ್ಲಿ ಘೋಷಿಸಿದ ನಂತರ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ಕೊರೊನಾ ಸೋಂಕು ತಗುಲಿರುವುದು ಬಹಿರಂಗವಾಯಿತು. ಟ್ರಂಪ್ ಸಂಪೂರ್ಣವಾಗಿ ಕೊರೊನಾದಿಂದ ಹೊರಬಂದಿಲ್ಲ ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಎಚ್ಚರಿಸಿದ ನಂತರ ರ್ಯಾಲಿ ಪ್ರಕಟಣೆ ಹೊರಬಿದ್ದಿದೆ.

 

Scroll Down To More News Today