ಢಾಕಾ: ಬಾಂಗ್ಲಾದೇಶದಲ್ಲಿ ಸಿತ್ರಾಂಗ್ ಚಂಡಮಾರುತ ಭಾರಿ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹ ಉಂಟಾಗಿ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 20 ಸಾವಿರ ಜನರು ನೀರಿನಲ್ಲಿ ಸಿಲುಕಿಕೊಂಡಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಎರಡು ದಿನ ಸುರಿದ ಭಾರಿ ಮಳೆಗೆ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ಇದರಿಂದ 80 ಲಕ್ಷ ಜನರು ಕತ್ತಲಲ್ಲಿಯೇ ಉಳಿದಿದ್ದರು. ಎಲ್ಲೆಂದರಲ್ಲಿ ಮರಗಳು, ಕಂಬಗಳು ಧರೆಗುರುಳಿದ್ದು, ಬುಧವಾರದವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
First time seeing continuous heavy rain with strong wind in Dhaka. I wonder what's the situation in coastal areas where the cyclone is actually hitting. May Allah protect them#CycloneSitrang#Bangladeshpic.twitter.com/XoPaZF75Zc
ಪ್ರವಾಹದಿಂದ 10,000 ಮನೆಗಳು ನಾಶವಾಗಿವೆ. 6,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಸಾವಿರಾರು ಮೀನಿನ ಹೊಂಡಗಳು ನಾಶವಾದವು. ಇದರಿಂದ ತೀವ್ರ ಆರ್ಥಿಕ ನಷ್ಟ ಉಂಟಾಗಿದೆ.
ಆದರೆ ಮಂಗಳವಾರ ಸಂಜೆ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು ಮತ್ತು ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು. ಚಂಡಮಾರುತದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವಿಮಾನ ಸೇವೆಗಳನ್ನು 21 ಗಂಟೆಗಳ ನಂತರ ಮಂಗಳವಾರದಿಂದ ಪುನರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಚಂಡಮಾರುತದ ವೇಳೆ ಕುಮಿಲಾ ಜಿಲ್ಲೆಯ ಮನೆಯೊಂದರಲ್ಲಿ 4 ವರ್ಷದ ಬಾಲಕಿ ತನ್ನ ಹೆತ್ತವರೊಂದಿಗೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶಾದ್ಯಂತ ವಿವಿಧ ಘಟನೆಗಳಲ್ಲಿ ಒಟ್ಟು 35 ಜನರು ಸಾವನ್ನಪ್ಪಿದ್ದಾರೆ.
ಬಾಂಗ್ಲಾದೇಶದ ಡೆಲ್ಟಾ ಪ್ರದೇಶದಲ್ಲಿ ಆಗಾಗ್ಗೆ ಚಂಡಮಾರುತಗಳು ಮತ್ತು ಪ್ರವಾಹಗಳಿಂದ 1.6 ಕೋಟಿ ಜನರು ಬಾಧಿತರಾಗಿದ್ದಾರೆ. ಆದರೆ ಹಿಂದಿನದಕ್ಕೆ ಹೋಲಿಸಿದರೆ ಹವಾಮಾನ ಬದಲಾವಣೆಯಿಂದ ಅತ್ಯಂತ ಅಪಾಯಕಾರಿ ಅನಾಹುತಗಳು ಸಂಭವಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019