ಅಮೆರಿಕಾದಲ್ಲಿ ಸ್ಫೋಟ, ದೇಶದ ಅತಿ ದೊಡ್ಡ ಡ್ಯಾಂನಲ್ಲಿ ಘಟನೆ !
ಅಮೆರಿಕದ ನೆವಾಡಾದಲ್ಲಿ ಸ್ಫೋಟ ಸಂಭವಿಸಿದೆ
ಅಮೆರಿಕದ ನೆವಾಡಾದಲ್ಲಿ ಸ್ಫೋಟ ಸಂಭವಿಸಿದೆ. ದೇಶದ ಅತಿ ದೊಡ್ಡ ಜಲಾಶಯ ಎಂದು ಕರೆಯಲ್ಪಡುವ ಹೂವರ್ ಅಣೆಕಟ್ಟಿನಲ್ಲಿ ಮಂಗಳವಾರ ರಾತ್ರಿ ಸ್ಫೋಟ ಸಂಭವಿಸಿದೆ. ಈ ಪ್ರದೇಶವು ಪ್ರವಾಸಿಗರಿಗೆ ಅತ್ಯಂತ ಜನಪ್ರಿಯ ಸ್ಥಳವಾಗಿರುವುದರಿಂದ, ಹಠಾತ್ ಸ್ಫೋಟವು ಅಲ್ಲಿಗೆ ಬಂದ ಸಂದರ್ಶಕರಲ್ಲಿ ಭಯವನ್ನು ಉಂಟುಮಾಡಿತು.
ನೆವಾಡಾ ಸ್ಮಾರಕದಲ್ಲಿ ದೈತ್ಯ ಬೆಂಕಿಯ ಚೆಂಡು ಏರುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಬೌಲ್ಡರ್ ಸಿಟಿ ಪೊಲೀಸರು ಸ್ಫೋಟವನ್ನು ಖಚಿತಪಡಿಸಿದ್ದಾರೆ.
ಹೂವರ್ ಅಣೆಕಟ್ಟಿನ ಸ್ಫೋಟವು ದಟ್ಟವಾದ ಹೊಗೆಯನ್ನು ಸೃಷಿಸಿತ್ತು. ಈ ಸಂಬಂಧ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಪ್ರಾಣ ಹಾನಿ ಅಥವಾ ಆಸ್ತಿ ಹಾನಿಯಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಈ ಸ್ಫೋಟಕ್ಕೆ ಕಾರಣಗಳು ಕೂಡ ತಿಳಿಯಬೇಕಿದೆ.
fiery blast hoover dam explosion captured in terrifying video in nevada America
Follow us On
Google News |
Advertisement