ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆ – ಖಾಸಗಿ ಬಸ್ ಸೇವೆಗಳ ಸ್ಥಗಿತ

ಶ್ರೀಲಂಕಾದಲ್ಲಿ, ಒಂದು ಲೀಟರ್ ಡೀಸೆಲ್ ಬೆಲೆ ಸುಮಾರು 220 ರೂ. ಮತ್ತು ಪ್ರತಿ ವ್ಯಕ್ತಿಗೆ ಗರಿಷ್ಠ 5 ಲೀಟರ್.

ಕೊಲಂಬೊ : ಭಾರತದ ನೆರೆಯ ರಾಷ್ಟ್ರವಾದ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶದ ವಿದೇಶಿ ವಿನಿಮಯ ಮೀಸಲು ಕುಸಿದಿರುವುದರಿಂದ ಇಂಧನ ಮತ್ತು ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅಸಮರ್ಥತೆ ಮುಂದುವರಿದಿದೆ.

ಹೀಗಾಗಿ ಪೆಟ್ರೋಲ್ , ಡೀಸೆಲ್ ಬಂಕ್ ಗಳಲ್ಲಿ ವಾಹನಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿವೆ. ಇಂಧನ ಕೊರತೆಯಿಂದಾಗಿ ಮೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ವಿದ್ಯುತ್ ಕೊರತೆ ಹೆಚ್ಚಾಗುತ್ತಿದ್ದು, ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಸ್ತುತ ಇಂಧನ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನುವಾರ ಎಲಿಯಾದಲ್ಲಿ ಗಮನ ಸೆಳೆಯುವ ಪ್ರತಿಭಟನೆ ನಡೆಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನಜೀವನದ ಮೇಲೆ ಆಗುತ್ತಿರುವ ದುಷ್ಪರಿಣಾಮ, ರಸಗೊಬ್ಬರದ ಕೊರತೆಯಿಂದ ಚಹಾ ಬೆಳೆಗೆ ಆಗುತ್ತಿರುವ ದುಷ್ಪರಿಣಾಮ, ಸರಣಿ ವಿದ್ಯುತ್ ಕಡಿತ, ಇಂಧನ ಅಭಾವ ಸೇರಿದಂತೆ ನಾನಾ ವಿಷಯಗಳ ಕುರಿತು ಒತ್ತು ನೀಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು.

Follow Us on : Google News | Facebook | Twitter | YouTube