Welcome To Kannada News Today

ಪಾಕಿಸ್ತಾನ ಪ್ರಸಿದ್ಧ ಗಾಯಕನ ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಗಾಯಕ ಹನೀಫ್ ಚಾಮ್ರೋಕ್ ಅವರನ್ನುಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.

🌐 Kannada News :

( Kannada News ) : ಬಲೂಚಿಸ್ತಾನ್ (ಪಾಕಿಸ್ತಾನ) : ಪಾಕಿಸ್ತಾನದ ಗಾಯಕ ಹನೀಫ್ ಚಮ್ರೋಕ್ ಅವರನ್ನು ಕೆಲವು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪಾಕಿಸ್ತಾನದ ನೈರುತ್ಯ ಬಲೂಚಿಸ್ತಾನ್ ಪ್ರಾಂತ್ಯದ ಟಾರ್ಬತ್ ಪಟ್ಟಣದಲ್ಲಿ ಗಾಯಕ ಹನೀಫ್ ರವರನ್ನು ತನ್ನ ಮನೆಯ ಹೊರಗೆ ಮೋಟಾರ್ ಸೈಕಲ್‌ನಲ್ಲಿ ಬಂದೂಕು ಧಾರಿಗಳು ಗುಂಡು ಹಾರಿಸಿ ಕೊಂದಿದ್ದಾರೆ.

ಇದನ್ನೂ ಓದಿ : ಟ್ರಂಪ್ ರ್ಯಾಲಿಯಲ್ಲಿ ಪಾಲ್ಗೊಂಡ 9 ಜನರಿಗೆ ಕೊರೊನಾ ಪಾಸಿಟಿವ್

ಹತ್ಯೆಗೀಡಾದ ಹನೀಫ್ ಮಹಿಳಾ ಹಕ್ಕುಗಳ ಕಾರ್ಯಕರ್ತ ತಯಾಬಾ ಬಲೂಚ್ ಅವರ ತಂದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಬಂದೂಕುಧಾರಿಗಳು ಜನಪ್ರಿಯ ಸ್ಥಳೀಯ ಗಾಯಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ತಂದೆಯನ್ನು ಮನೆಯ ಹೊರಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸ್ ಮುಖ್ಯಸ್ಥ ರೋಶನ್ ಅಲಿ, ಹತ್ಯೆಯ ಉದ್ದೇಶವು ತಕ್ಷಣವೇ ತಿಳಿದುಬಂದಿಲ್ಲ ಮತ್ತು ಹತ್ಯೆಯ ಜವಾಬ್ದಾರಿಯನ್ನು ಇಲ್ಲಿಯವರೆಗೆ ಯಾರೂ ವಹಿಸಿಕೊಂಡಿಲ್ಲ. ಶೂಟಿಂಗ್ ನಂತರ ಬಂದೂಕುಧಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ, ಎಂದು ತಿಳಿಸಿದರು.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile