Hindu Temple, ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ
Hindu Temple : ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯ ಧ್ವಂಸ
ಕರಾಚಿ: ಪಾಕಿಸ್ತಾನದಲ್ಲಿ (Pakistan) ಹಿಂದೂ ದೇವಾಲಯವನ್ನು (Hindu Temple) ಧ್ವಂಸಗೊಳಿಸಲಾಗಿದೆ. ಕರಾಚಿಯ (Karachi) ಕೋರಂಗಿ ಪ್ರದೇಶದಲ್ಲಿರುವ (Korangi area) ಶ್ರೀ ಮಾರಿ ಮಾತಾ ಮಂದಿರದ (Shri Mari Maata Mandir) ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ.
ಕೋರಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಧ್ವಂಸವು ಸ್ಥಳೀಯ ಹಿಂದೂಗಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಸುಮಾರು 8 ಮಂದಿ ಬೈಕ್‌ನಲ್ಲಿ ಬಂದು ದೇವಸ್ಥಾನಕ್ಕೆ ನುಗ್ಗಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಸಿಂಧೂ ನದಿಯ ಬಳಿಯ ಐತಿಹಾಸಿಕ ದೇವಾಲಯವನ್ನೂ ಕೆಡವಲಾಗಿತ್ತು.
Hindu temple vandalised in Karachi
Follow us On
Google News |