Welcome To Kannada News Today

ಹೆಮ್ಮಾರಿ ಕೊರೋನಾಗೆ ಹೆಸರಾಂತ ಹಾಲಿವುಡ್ ನಟಿ ಸಾವು

Hollywood actress Hilary Heath's death due to coronavirus was confirmed by her Son

🌐 Kannada News :

ಪ್ರಪಂಚವನ್ನೇ ತನ್ನ ಕಪಿ ಮುಷ್ಟಿಯಲ್ಲಿ ಬಿಗಿದಿರುವ ಕೊರೋನಾ ಸೋಂಕು, ಬಡವರು ಸಾಹುಕಾರರೂ, ಮಕ್ಕಳು ವೃದ್ದರು ಎನ್ನದೆ ಇಡೀ ಮನುಕುಲವನ್ನೇ ಬೆಚ್ಚಿಬೀಳಿಸಿದೆ.. ವಿಶ್ವದಾದ್ಯಂತ ಸಾವಿರಾರು ಜನರ ಬಳಿ ಪಡೆದಿದೆ. ಇನ್ನು ನಿಲ್ಲದೆ ಕೊರೋನಾ ಅಬ್ಬರ, ಇದೀಗ ಹಾಲಿವುಡ್ ನಟಿಯ ಪ್ರಾಣವನ್ನೂ ತೆಗೆದಿದೆ.

ಹೌದು, ಹಾಲಿವುಡ್ ನಟಿ ಹಿಲರಿ ಹೀತ್ (74) ಕೊರೋನವೈರಸ್ ನಿಂದ ಮೃತಪಟ್ಟಿದ್ದಾರೆ. ಕರೋನಾದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ ಹೀತ್ ಸಾವನ್ನಪ್ಪಿದ್ದಾರೆ ಎಂದು ಹಾಲಿವುಡ್ ಹಿರಿಯ ಗಣ್ಯರು ಪ್ರಕಟಿಸಿದ್ದಾರೆ. ನಟಿಯ ಸಾವಿನ ಬಗ್ಗೆ ನಟಿಯ ದತ್ತು ಪುತ್ರ ಅಲೆಕ್ಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಜನಿಸಿದ ದಿವಂಗತ ನಟಿ 1968 ರಲ್ಲಿ ಮೈಕೆಲ್ ರೀವ್ಸ್ ಭಯಾನಕ ಚಲನಚಿತ್ರ ವಿಚ್‌ಫೈಂಡರ್ ಜನರಲ್ ಚಿತ್ರದ ಮೂಲಕ ದೊಡ್ಡ ಪರದೆಯತ್ತ ಪಾದಾರ್ಪಣೆ ಮಾಡಿದ್ದರು. ಹೀತ್ ಅವರ ಮಗ ಡೇನಿಯಲ್ ಹೀತ್, ಮತ್ತು ಅವರ ಮಗಳು ಲಾರಾ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile