Balochistan Accident; ಪಾಕಿಸ್ತಾನ, ಬಲೂಚಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಬಿದ್ದು 39 ಸಾವು

Story Highlights

Balochistan Accident: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಇಂದು ಅಂದರೆ ಭಾನುವಾರ ಬೆಳಿಗ್ಗೆ ಬಸ್ ಕಂದಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ 39 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ, ಪಾಕಿಸ್ತಾನಿ ಮಾಧ್ಯಮ ವರದಿ ಪ್ರಕಾರ, ಲಾಸ್ಬೆಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಮಾಹಿತಿ ಪ್ರಕಾರ ಬಸ್ ನಲ್ಲಿ ಸುಮಾರು 48 ಮಂದಿ ಪ್ರಯಾಣಿಕರಿದ್ದರು. ಪೊಲೀಸರ ಪ್ರಕಾರ, ಬಸ್‌ನ ವೇಗವೇ ಆಘಾತಕ್ಕೆ ಕಾರಣವಾಗಿದೆ. ಇದಾದ ಬಳಿಕ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ. ಇಲ್ಲಿಯವರೆಗೆ ಮಹಿಳೆ ಮತ್ತು ಮಗು ಸೇರಿದಂತೆ 3 ಜನರನ್ನು ರಕ್ಷಿಸಲಾಗಿದೆ.

ಸಿಕ್ಕಿರುವ ಸುದ್ದಿಯ ಪ್ರಕಾರ, ಹೆಚ್ಚಿನ ವೇಗದ ಕಾರಣ ಲಾಸ್ಬೆಲಾ ಬಳಿ ಯು-ಟರ್ನ್ ತೆಗೆದುಕೊಳ್ಳುವಾಗ ಬಸ್ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ ಹಳ್ಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಏತನ್ಮಧ್ಯೆ, ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈಧಿ ಫೌಂಡೇಶನ್‌ನ ಸಾದ್ ಈಧಿ ಅವರು ಅಪಘಾತ ಸ್ಥಳದಿಂದ ಇದುವರೆಗೆ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Horrific road accident in Pakistan Balochistan

Related Stories