ಸೌದಿ ಅರೇಬಿಯಾದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಐ.ಎಸ್.ಎಫ್ ಕರ್ನಾಟಕ ತಂಡ

ಸೌದಿ ಅರೇಬಿಯಾದಲ್ಲಿ ಮೃತಪಟ್ಟ ತಮಿಳುನಾಡು ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಐ.ಎಸ್.ಎಫ್ ಕರ್ನಾಟಕ ತಂಡ

ಬುರೈದ (Saudi Arabia): ಹೃದಯಾಘಾತದಿಂದ ಮೃತಪಟ್ಟ ತಮಿಳುನಾಡು ಮೂಲದ ಮೊಹಮ್ಮದ್ ಅಶ್ರಫ್ ಅಲಿ ಎಂಬ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ (Indian Social Forum) ಅಲ್-ಖಸೀಮ್ ಘಟಕ ನೆರವಾಗಿದೆ.

ಮೃತರು ಒಂದು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾದ (Saudi Arabia) ಬುರೈದ ನಗರಕ್ಕೆ ಮನೆ ಕೆಲಸಕ್ಕಾಗಿ ಬಂದಿದ್ದರು ಹಾಗೂ ಕೆಲಸ ನಿರ್ವಹಿಸುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕುಟುಂಬಸ್ಥರ ಸಂಪರ್ಕದ ಕೊರತೆ ಮತ್ತು ಅಸಮರ್ಪಕ ದಾಖಲೆಯಿಂದ ಬುರೈದದ ಕಿಂಗ್ ಫಹದ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದ ಮೃತದೇಹದ ಅಂತ್ಯಕ್ರಿಯೆಗಾಗಿ ಸ್ಥಳೀಯರು ಇಂಡಿಯನ್ ಸೋಶಿಯಲ್ ಫೋರಂ ನೆರವು ಕೋರಿದ್ದರು.

ತಕ್ಷಣ ಕಾರ್ಯಪ್ರವೃತರಾದ ಇಂಡಿಯನ್ ಸೋಶಿಯಲ್ ಫೋರಂ, ಅಲ್-ಖಸೀಮ್ ಘಟಕದ ಕಾರ್ಯಕರ್ತರಾದ ಅಯಾಝ್ ಕಾಟಿಪಳ್ಳ, ಇರ್ಫಾನ್ ಅಡ್ಡೂರ್ ಮತ್ತು ಮೊಹಮ್ಮದ್ ಶೇಕ್ ರವರು ಮೃತರ ಪ್ರಾಯೋಜಕರು ಹಾಗೂ ಮನೆಯವರ ಅನುಮತಿ ಪತ್ರದೊಂದಿಗೆ ಸ್ಥಳೀಯ ಪೋಲಿಸ್ ಠಾಣೆ ಮತ್ತು ಆಸ್ಪತ್ರೆಯ ನಿರಂತರ ಭೇಟಿಯ ನಂತರ ದೃಢೀಕರಣ ಪತ್ರದೊಂದಿಗೆ ಮಸ್ಜಿದ್ ಅಲ್-ಖಲೀಜ್ಹ್ ನಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.

ಸೌದಿ ಅರೇಬಿಯಾದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಐ.ಎಸ್.ಎಫ್ ಕರ್ನಾಟಕ ತಂಡ - Kannada News

ಇಂಡಿಯನ್ ಸೋಶಿಯಲ್ ಫೋರಂನ ಮಾನವೀಯ ನೆರವಿಗೆ ಮೃತರ ಸಂಬಂಧಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ISF Karnataka team assisted in the funeral of a person who died in Saudi Arabia

Follow us On

FaceBook Google News

Advertisement

ಸೌದಿ ಅರೇಬಿಯಾದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಐ.ಎಸ್.ಎಫ್ ಕರ್ನಾಟಕ ತಂಡ - Kannada News

Read More News Today