Brazil Floods: ಬ್ರೆಜಿಲ್ ಪ್ರವಾಹದಲ್ಲಿ 91 ಸಾವು, 24 ಕ್ಕೂ ಹೆಚ್ಚು ಮಂದಿ ನಾಪತ್ತೆ
Brazil Floods: ಬ್ರೆಜಿಲ್ನ ಪ್ರವಾಹದಲ್ಲಿ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ
Brazil Floods: ಬ್ರೆಜಿಲ್ನ ಪ್ರವಾಹದಲ್ಲಿ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಉತ್ತರ ಬ್ರೆಜಿಲ್ನ ಪೆರ್ನಾಂಬುಕೊ ರಾಜ್ಯದ ಅಧಿಕಾರಿಗಳು ಸೋಮವಾರ ಈ ಮಾಹಿತಿ ನೀಡಿದ್ದಾರೆ.
ಸರ್ಕಾರದ ಹೇಳಿಕೆಯ ಪ್ರಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ನೂರಾರು ರಕ್ಷಣಾ ಸಿಬ್ಬಂದಿ ನಾಪತ್ತೆಯಾದ 26 ಜನರ ಹುಡುಕಾಟದಲ್ಲಿ ತೊಡಗಿದ್ದಾರೆ. ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಸೋಮವಾರ ಪೆರ್ನಾಂಬುಕೊದ ರಾಜಧಾನಿ ರೆಸಿಫೆ ಮತ್ತು ಜಬೋಟಾವೊ ಡಾಸ್ ಗುರಾರಾಪ್ಸ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು, ಹೆಲಿಕಾಪ್ಟರ್ ಲ್ಯಾಂಡ್ ಆಗುವಷ್ಟು ಪರಿಸ್ಥಿತಿ ಇಲ್ಲ ಎಂದರು.
ನಾಪತ್ತೆಯಾಗಿರುವ ಎಲ್ಲರನ್ನು ಗುರುತಿಸುವವರೆಗೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಕೆಲವರು ದೋಣಿಗಳು ಅಥವಾ ಹೆಲಿಕಾಪ್ಟರ್ಗಳಲ್ಲಿ – ಹುಡುಕಾಟ ಮತ್ತು ರಕ್ಷಣಾ ಕಾರ್ಯವನ್ನು ಪುನರಾರಂಭಿಸಿದ್ದಾರೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ.
91 dead 24 missing in Brazil floods
Follow Us on : Google News | Facebook | Twitter | YouTube