ಉತ್ತರ ಕೊರಿಯಾದಲ್ಲಿ ಕೊರೊನಾ ಅವಾಂತರ.. ಒಂದೇ ದಿನದಲ್ಲಿ 1 ಲಕ್ಷದ 86 ಸಾವಿರ ಪ್ರಕರಣಗಳು
ಉತ್ತರ ಕೊರಿಯಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ದೇಶದಲ್ಲಿ ಒಂದೇ ದಿನ 1 ಲಕ್ಷದ 86 ಸಾವಿರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಸಿಯೋಲ್: ಉತ್ತರ ಕೊರಿಯಾದಲ್ಲಿ (North Korea Covid) ಕೊರೊನಾ ಅಟ್ಟಹಾಸ (Corona Cases) ಮುಂದುವರಿದಿದೆ. ದೇಶದಲ್ಲಿ ಒಂದೇ ದಿನ 1 ಲಕ್ಷದ 86 ಸಾವಿರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,86,094 ಜನರು ಜ್ವರದ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್ಎ) ವರದಿ ಮಾಡಿದೆ. ಇಲ್ಲಿಯವರೆಗೆ 67 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಿಮ್ಸ್ ಸಾಮ್ರಾಜ್ಯದಲ್ಲಿ ಏಪ್ರಿಲ್ ಕೊನೆಯ ವಾರದಿಂದ ಜ್ವರ ಪೀಡಿತರು ಹೆಚ್ಚಾಗುತ್ತಿದ್ದಾರೆ. ಪ್ರಸ್ತುತ ಆ ಸಂಖ್ಯೆ 2.64 ಮಿಲಿಯನ್ ತಲುಪಿದೆ. ಇವರಲ್ಲಿ 2.06 ಮಿಲಿಯನ್ ಜನರು ಚೇತರಿಸಿಕೊಂಡಿದ್ದಾರೆ ಎಂದು ಕೆಸಿಎನ್ಎ ತಿಳಿಸಿದೆ. ಈ ತಿಂಗಳ 12 ರಂದು ದೇಶದಲ್ಲಿ ಮೊದಲ ಕೊರೊನಾ ಸಾವು ವರದಿಯಾಗಿದೆ.
North Korea Reports 186000 New Suspected Corona Cases
Follow Us on : Google News | Facebook | Twitter | YouTube