Welcome To Kannada News Today

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತ ಮತ್ತು ಆರೋಗ್ಯವಾಗಿದ್ದಾರೆ

Kim Jong Un: North Korean leader is 'alive and well', says South Korea

🌐 Kannada News :

ದಕ್ಷಿಣ ಕೊರಿಯಾ, ಕಿಮ್ ಜೊಂಗ್ ಉನ್ “ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ” ಎಂದು ಹೇಳಿದೆ, ಉತ್ತರ ಕೊರಿಯಾದ ನಾಯಕ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು ” ಸತ್ತೇ ಹೋಗಿದ್ದಾರೆ, ನಾಪತ್ತೆಯಾಗಿದ್ದಾರೆ ಎಂಬ ಹಲವಾರು ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಹೌದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಅವರ ಉನ್ನತ ಮಟ್ಟದ ಭದ್ರತಾ ಸಲಹೆಗಾರ ತಿಳಿಸಿದ್ದಾರೆ. ಈ ಮೂಲಕ ಕಿಮ್ ಜಾಂಗ್ ಉನ್ ಅವರ ಆನಾರೋಗ್ಯದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ನಮ್ಮ ಸರ್ಕಾರದ ನಿಲುವು ದೃಢವಾಗಿದೆ, ಹಾಗೂ ಸ್ಥಿತಿಗತಿ ಉತ್ತಮವಾಗಿದೆ,  ಕಿಮ್ ಜಾಂಗ್ ಉನ್ ಇನ್ನೂ ಬದುಕಿದ್ದು ಆರೋಗ್ಯವಾಗಿದ್ದಾರೆ ಎಂದು ನಿನ್ನೆ ಸಿಎನ್ಎನ್ ಗೆ ನೀಡಿದ್ದ ಸಂದರ್ಶನದ ವೇಳೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರ ವಿದೇಶಾಂಗ ನೀತಿ ಸಲಹೆಗಾರ ಮೂನ್ ಚುಂಗ್-ಇನ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಪೂರ್ವ ಭಾಗದಲ್ಲಿರುವ ರೆಸಾರ್ಟ್ ಪಟ್ಟಣ ವೊನ್ಸನ್ ನಲ್ಲಿ ಕಳೆದ ಏಪ್ರಿಲ್ 13ರಿಂದ ನೆಲೆಸಿದ್ದು, ಇಲ್ಲಿಯವರೆಗೆ ಅವರ ಯಾವುದೇ ಶಂಕಾಸ್ಪದ ಚಲನವಲನಗಳು ಪತ್ತೆಯಾಗಿಲ್ಲ ಎಂದಿದ್ದಾರೆ.

ಶಸ್ತ್ರಚಿಕಿತ್ಸೆಯ ವಿಧಾನವನ್ನು ಅನುಸರಿಸಿ ಕಿಮ್ “ಗಂಭೀರ ಅಪಾಯದಲ್ಲಿದ್ದಾರೆ” ಎಂದು ವರದಿ ಯಾಗಿತ್ತು.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.