ಟ್ರಂಪ್‌ ಆಡಳಿತದ ನಿರ್ಧಾರದ ಬಗ್ಗೆ ಮ್ಯಾಟಿಸ್ ಅಸಮಾಧಾನ

Mattis is upset about the decision of the Trump administration

ಟ್ರಂಪ್‌ ಆಡಳಿತದ ನಿರ್ಧಾರದ ಬಗ್ಗೆ ಮ್ಯಾಟಿಸ್ ಅಸಮಾಧಾನ

ವಾಷಿಂಗ್ಟನ್‌: ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿದ್ದ ಜಿಮ್‌ ಮ್ಯಾಟಿಸ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಟ್ರಂಪ್‌ ಆಡಳಿತದ ನಿರ್ಧಾರದ ಬಗ್ಗೆ ಅಸಮಾಧಾನ ಗೊಂಡಿರುವ ಮ್ಯಾಟಿಸ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಟ್ರಂಪ್‌ ಆಡಳಿತದ ನಿರ್ಧಾರದಂತೆ ಸಿರಿಯಾದಿಂದ 2,000 ಸೈನಿಕರನ್ನು ವಾಪಸ್ ಕರೆಸಿಕೊಳ್ಳುವದಾಗಿತ್ತು,  ಈ  ನಿರ್ಧಾರದ ಬಗ್ಗೆ ಜಿಮ್ ಮ್ಯಾಟಿಸ್ ತೀವ್ರ ಭಿನ್ನಮತ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಜನರಲ್ ಆಗಿರುವ ಮ್ಯಾಟಿಸ್‌, ಅಧ್ಯಕ್ಷ ಟ್ರಂಪ್‌ ನಿರ್ಧಾರಗಳ ವಿರುದ್ಧ ಆಗಾಗ ಅಸಮಾಧಾನ ಪ್ರಕಟಿಸುತ್ತಿದ್ದರು.

ತನ್ನ  ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಪತ್ರ ಬರೆದ ಮ್ಯಾಟಿಸ್‌ ಅಸಮಾಧಾನದ ಮಾತುಗಳನ್ನೇ ಹೇಳಿಕೊಂಡಿದ್ದಾರೆ.

ತಮ್ಮ ಉತ್ತರಾಧಿಕಾರಿಯನ್ನು ನೇಮಿಸಲು ಅಧ್ಯಕ್ಷ ಟ್ರಂಪ್‌ಗೆ ಸ್ವಲ್ಪ ಕಾಲಾವಕಾಶ ನೀಡಿರುವ ಮ್ಯಾಟಿಸ್, ಫೆಬ್ರವರಿ ಅಂತ್ಯದ ವರೆಗೂ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ////

WebTitle : ಟ್ರಂಪ್‌ ಆಡಳಿತದ ನಿರ್ಧಾರದ ಬಗ್ಗೆ ಮ್ಯಾಟಿಸ್ ಅಸಮಾಧಾನ-Mattis is upset about the decision of the Trump administration