ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು, ಹಾಲು ರೂ.210, ಚಿಕನ್ ರೂ.780.. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಪಾಕಿಸ್ತಾನಿ ಜನ

Pakistan Economic Crisis: ಕಳೆದ ಕೆಲವು ದಿನಗಳಿಂದ ಸೋದರ ರಾಷ್ಟ್ರ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಆ ದೇಶದಲ್ಲಿ ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ನಾವು ನಿತ್ಯ ಬಳಸುವ ಹಾಲಿನಿಂದ ಹಿಡಿದು ಚಿಕನ್ ವರೆಗೆ ಎಲ್ಲ ಬೆಲೆಯೂ ವಿಪರೀತ ಏರಿಕೆಯಾಗಿದೆ.

Bengaluru, Karnataka, India
Edited By: Satish Raj Goravigere

Pakistan Economic Crisis: ಕಳೆದ ಕೆಲವು ದಿನಗಳಿಂದ ಸೋದರ ರಾಷ್ಟ್ರ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಆ ದೇಶದಲ್ಲಿ ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ನಾವು ನಿತ್ಯ ಬಳಸುವ ಹಾಲಿನಿಂದ ಹಿಡಿದು ಚಿಕನ್ ವರೆಗೆ ಎಲ್ಲ ಬೆಲೆಯೂ ವಿಪರೀತ ಏರಿಕೆಯಾಗಿದೆ.

ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದರಿಂದ ಅಲ್ಲಿ ಏನನ್ನೂ ಖರೀದಿಸಲು ಭಾರಿ ಹೊರೆಯಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

Pakistan Economic Crisis 210 Rs Per Liter Milk And Chicken Now Costs Over 780

ನಾವು ನಿತ್ಯ ಬಳಸುವ ಹಾಲಿನಿಂದ ಹಿಡಿದು ಚಿಕನ್ ವರೆಗೆ ಎಲ್ಲ ಬೆಲೆಯೂ ವಿಪರೀತ ಏರಿಕೆಯಾಗಿದೆ. ಸದ್ಯ ಅಲ್ಲಿ ಲೀಟರ್ ಹಾಲಿನ ಬೆಲೆ ರೂ.190ರಿಂದ ರೂ.210ಕ್ಕೆ ಏರಿಕೆಯಾಗಿದೆ. ಕಳೆದೆರಡು ದಿನಗಳಿಂದ ಲೈವ್ ಬ್ರೈಲರ್ ಕೋಳಿ ಕೆಜಿಗೆ 30-40 ರೂ. ಹೆಚ್ಚಾಗಿದೆ. ಇದರಿಂದಾಗಿ ಕೋಳಿಯ ಬೆಲೆ ಕೆಲವೆಡೆ ಕೆಜಿಗೆ ರೂ.480-500, ಇನ್ನುಳಿದ ಪ್ರದೇಶಗಳಲ್ಲಿ ರೂ.700-780 ಇದೆ ಎಂದು ಪ್ರಮುಖ ಪತ್ರಿಕೆ ಡಾನ್ ವರದಿ ಮಾಡಿದೆ.

ಕರಾಚಿಯಲ್ಲಿ 620-650 ರೂ.ಗಳಷ್ಟಿದ್ದ ಒಂದು ಕಿಲೋ ಚಿಕನ್ ಬೆಲೆ ಇತ್ತೀಚೆಗೆ 780 ರೂ.ಗೆ ತಲುಪಿದೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ನಂತಹ ಕೆಲವು ನಗರಗಳಲ್ಲಿ ಕೋಳಿಮಾಂಸದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಒಂದು ಕೆಜಿ ಕೋಳಿ ಮಾಂಸ 700-780 ರೂ.ಗೆ ಮಾರಾಟವಾಗುತ್ತಿದೆ. ಹಾಗೂ ಬೋನ್ ಲೆಸ್ ಚಿಕನ್ ಬೆಲೆ ಕೆಜಿಗೆ 1,000-1,100 ರೂ.ಗೆ ತಲುಪಿದೆ.

ಸಿಂಧ್ ಪೌಲ್ಟ್ರಿ ಸಗಟು ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ (ಸಿಂಧ್ ಕೋಳಿ ಸಗಟು ವ್ಯಾಪಾರಿಗಳ ಸಂಘ) ಕಮಲ್ ಅಖ್ತರ್ ಸಿದ್ದಿಕಿ ಮಾತನಾಡಿ, ಕೋಳಿಮಾಂಸದ ಬೆಲೆ ಹೆಚ್ಚಾಗಿದೆ. ಕೋಳಿ ಬೆಲೆ ಏರಿಕೆಗೆ ಆರ್ಥಿಕ ಬಿಕ್ಕಟ್ಟು ಹಾಗೂ ಮೇವಿನ ಕೊರತೆಯಿಂದ ಹಲವು ಕೋಳಿ ವ್ಯಾಪಾರಗಳು ಮುಚ್ಚಿ ಹೋಗಿರುವುದು ಪ್ರಮುಖ ಕಾರಣ ಎಂದು ಹೇಳಿದರು. ದಿನದಿಂದ ದಿನಕ್ಕೆ ಏರುತ್ತಿರುವ ಈ ಬೆಲೆಯನ್ನು ಕಂಡು ಚಿಕನ್ ಪ್ರಿಯರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ.

Pakistan Economic Crisis 210 Rs Per Liter Milk And Chicken Now Costs Over 780