ಕಾಶ್ಮೀರ ವಿಚಾರ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ : ಪಾಕಿಸ್ತಾನ

Pakistan to Take Kashmir Issue to International Court of Justice

ಕಾಶ್ಮೀರ ವಿಚಾರ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ : ಪಾಕಿಸ್ತಾನ – Pakistan to Take Kashmir Issue to International Court of Justice

ಕಾಶ್ಮೀರ ವಿಚಾರ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ : ಪಾಕಿಸ್ತಾನ

ಕನ್ನಡ ನ್ಯೂಸ್ ಟುಡೇ – ಇಸ್ಲಾಮಾಬಾದ್ :  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರ ವಿಶೇಷ ಸಹಾಯಕಿ ಫಿರ್ದೌಸ್ ಆಶಿಕ್ ಅವನ್ ಅವರು, ಪಾಕಿಸ್ತಾನವು ಎಲ್ಲಾ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರದ ವಿಷಯವನ್ನು ಬಿಚ್ಚಿಡಲಿದೆ ಎಂದು ತಿಳಿಸಿದ್ದಾರೆ.. ಪಾಕಿಸ್ತಾನವು ಕಾಶ್ಮೀರ ಕುರಿತ ತನ್ನ ನಿಲುವಿಗೆ ಪಾಕಿಸ್ತಾನ ಅಂತರರಾಷ್ಟ್ರೀಯ ಬೆಂಬಲ ಕೋರಿದೆ.

ಈ ಮೂಲಕ, ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಪಾಕಿಸ್ತಾನ ಹೇಳಿದೆ ಎಂದು ಮಂಗಳವಾರ ವರದಿಗಳು ತಿಳಿಸಿವೆ. “ನಾವು ಕಾಶ್ಮೀರ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಪಾಕಿಸ್ತಾನ ಚಾನೆಲ್‌ಗೆ ಹೇಳಿಕೆ ನೀಡಿದ್ದಾರೆ. ಎಲ್ಲಾ ಕಾನೂನು ಅಂಶಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ..

ಈ ನಡುವೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರ ವಿಶೇಷ ಸಹಾಯಕಿ ಫಿರ್ದೌಸ್ ಆಸಿಕ್ ಅವನ್ ಅವರು ಪಾಕಿಸ್ತಾನವು ಎಲ್ಲಾ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಲಿದೆ ಎಂದು ಹೇಳಿದ್ದಾರೆ. ಮಂಗಳವಾರ ನಡೆದ ಸರಣಿ ಟ್ವೀಟ್‌ಗಳಲ್ಲಿ, ಫಿರ್ದೌಸ್ ಆಸಿಕ್ ಕಾಶ್ಮೀರದ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಮತ್ತು ಈ ವಿಷಯದ ಬಗ್ಗೆ ಅಮೆರಿಕದ ಸಾಮರಸ್ಯದ ಪಾತ್ರವನ್ನುಟ್ವೀಟ್ ಗಳಲ್ಲಿ ಉಲ್ಲೇಖಿಸಿದ್ದಾರೆ.

“ಕಾಶ್ಮೀರ ತನ್ನ ಆಂತರಿಕ ವಿಷಯ ಎಂಬ ಭಾರತೀಯ ಹಕ್ಕನ್ನು ಯುಎನ್‌ಎಸ್‌ಸಿ ಸಭೆಯಲ್ಲಿ ತಳ್ಳಿಹಾಕಲಾಗಿದೆ. ಭಾರತವು ಏಕಪಕ್ಷೀಯ ನಡೆಗಳಿಂದ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ, ಅಥವಾ ಜಗತ್ತನ್ನು ಮರುಳು ಮಾಡಲು ಸಾಧ್ಯವಿಲ್ಲ ”ಎಂದು ಅವರು ಉಲ್ಲೇಖಿಸಿದ್ದಾರೆ. ////

Web Title : Pakistan to Take Kashmir Issue to International Court of Justice