ವೈರಲ್ ವಿಡಿಯೋ; ಯುವಕನ ಕೆನ್ನೆಗೆ ಬಾರಿಸಿದ ಪಾಕಿಸ್ತಾನಿ ಟಿವಿ ಪತ್ರಕರ್ತೆ

ಟಿವಿ ಲೈವ್ ಅಡ್ಡಿಪಡಿಸಿದ ಯುವಕನ ಕೆನ್ನೆಗೆ ಪಾಕಿಸ್ತಾನಿ ಪತ್ರಕರ್ತೆ ಬಾರಿಸಿದ ವಿಡಿಯೋ ವೈರಲ್

Viral Video: ಟಿವಿ ಪತ್ರಕರ್ತರು ಲೈವ್ ಆಗಿರುವಾಗ ವಿಚಿತ್ರ ಘಟನೆಗಳು ನಡೆಯುತ್ತವೆ. ಅವರ ಸುತ್ತಲಿನ ಜನಸಂದಣಿ ಅವರಿಗೆ ಕೆಲವೊಮ್ಮೆ ಬೇಸರ ತರಿಸುತ್ತದೆ. ನೇರ ಪ್ರಸಾರಕ್ಕೆ ಅಡ್ಡಿಯಾಗುತ್ತದೆ. ಹಾಗೆ ಅಡ್ಡಿಪಡಿಸಿದ ಯುವಕನ ಕೆನ್ನೆಗೆ ಪಾಕಿಸ್ತಾನಿ ಪತ್ರಕರ್ತೆ ಬಾರಿಸಿದ ವಿಡಿಯೋ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ಟಿವಿ ಪತ್ರಕರ್ತೆ ಮೈರಾ ಹಶ್ಮಿ ಈದ್ ಅಲ್ ಅಧಾ ಆಚರಣೆಯ ನೇರ ಪ್ರಸಾರವನ್ನು ನೀಡುತ್ತಿದ್ದಾರೆ. ಜನರು ಆಕೆಯ ಸುತ್ತಲೂ ಜಮಾಯಿಸಿದ್ದಾರೆ. ಆಕೆ ಮಾತನಾಡುತ್ತಿರುವಾಗ, ಅಡ್ಡಿಪಡಿಸಿದ ಯುವಕನಿಗೆ ಆಕೆ ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಅಲ್ಲಿದ್ದವರೆಲ್ಲ ಒಮ್ಮೆಲೇ ಮೌನವಾದರು. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಇದುವರೆಗೆ 4.4 ಲಕ್ಷ ಮಂದಿ ವೀಕ್ಷಿಸಿದ್ದಾರೆ.

pakistani tv journalist slap youth video goes viral

ವೈರಲ್ ವಿಡಿಯೋ; ಯುವಕನ ಕೆನ್ನೆಗೆ ಬಾರಿಸಿದ ಪಾಕಿಸ್ತಾನಿ ಟಿವಿ ಪತ್ರಕರ್ತೆ - Kannada News

ಇವುಗಳನ್ನೂ ಓದಿ..

Yash19 ಹೆಚ್ಚು ಸದ್ದು ಮಾಡುತ್ತಿದೆ ಯಶ್ ಮುಂದಿನ ಸಿನಿಮಾ

KGF Star Yash ಆಸ್ತಿ ಮೌಲ್ಯ ಎಷ್ಟು ನೋಡಿ

ಬಾಹುಬಲಿ ಮತ್ತು RRR ಅನ್ನು ಮೀರಿಸಲಿದಿಯಂತೆ ಪುಷ್ಪಾ 2

 

Follow us On

FaceBook Google News