Welcome To Kannada News Today

Afghanistan: ಹಸಿವು, ಹಣವಿಲ್ಲ: ಮನೆ ವಸ್ತುಗಳನ್ನೇ ಮಾರಲು ಮುಂದಾದ ಜನ, ಹದಗೆಡುತ್ತಿರುವ ಆಫ್ಘನ್ ಆರ್ಥಿಕತೆ

Afghanistan: ತಾಲಿಬಾನ್, ದೇಶದ ನಿಯಂತ್ರಣವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಆರ್ಥಿಕತೆಯು ಕುಸಿದಿದೆ, ಹಸಿವಿನಿಂದ ಜನರು ಕಂಗಾಲಾಗಿದ್ದಾರೆ.

🌐 Kannada News :

Afghanistan: ಕಾಬೂಲ್: ತಾಲಿಬಾನ್, ದೇಶದ ನಿಯಂತ್ರಣವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಆರ್ಥಿಕತೆಯು ಕುಸಿದಿದೆ, ಹಸಿವಿನಿಂದ ಜನರು ಕಂಗಾಲಾಗಿದ್ದಾರೆ.

ಕಾಬೂಲ್ ಜನರು ತಮ್ಮ ಮನೆಯ ವಸ್ತುಗಳನ್ನು ಬೀದಿಗಳಲ್ಲಿ ಮಾರಾಟ ಮಾಡಿ ಮತ್ತು ತಮ್ಮ ಮಕ್ಕಳಿಗೆ ಆಹಾರವನ್ನು ಖರೀದಿಸಲು ಮುಂದಾಗಿದ್ದಾರೆ.

ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡ ನಂತರ, ಜನರು ತಮ್ಮ ಉಳಿತಾಯವನ್ನು ಬ್ಯಾಂಕಿನಿಂದ ಹಿಂಪಡೆಯಲು ಮಾಡಿದ ಅನೇಕ ಪ್ರಯತ್ನಗಳು ವಿಫಲವಾದವು. ತಾಲಿಬಾನ್ ಭಯದಿಂದ, ಬ್ಯಾಂಕುಗಳು ಮುಚ್ಚಲ್ಪಟ್ಟವು ಮತ್ತು ಕಾಬೂಲ್ ಜನರು ತಮ್ಮ ಹಣವನ್ನು ಬ್ಯಾಂಕಿನಿಂದ ಹಿಂತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಜನರು ಕೆಲಸವಿಲ್ಲದಂತಾಗಿದ್ದಾರೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಂತೆ, ಅಗತ್ಯ ವಸ್ತುಗಳ ಕೊರತೆಯಿಂದ ಜನ ಬೀದಿಗೆ ಬಿದ್ದಿದ್ದಾರೆ.

ಕಾಬೂಲ್ ನ ಸಮ್ಮನ್ ಇ ಹಜೊರಿ ಪಾರ್ಕ್ ಪ್ರದೇಶದಲ್ಲಿ, ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಬಳಸುವ ಕಾರ್ಪೆಟ್, ಫ್ರಿಡ್ಜ್ ಮತ್ತು ಎಲ್ ಇಡಿ ಟಿವಿ ಸೇರಿದಂತೆ ಹಲವು ದುಬಾರಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನ ಜನರು ತಮ್ಮ ಮಕ್ಕಳ ಹಸಿವೆ ನೋಡಲಾಗದೆ ಗೃಹೋಪಯೋಗಿ ವಸ್ತುಗಳನ್ನು ಬೀದಿ ಬದಿ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಈಗಾಗಲೇ ಆರ್ಥಿಕವಾಗಿ ದುರ್ಬಲವಾಗಿರುವ ಅಫ್ಘಾನಿಸ್ತಾನವು ತಾಲಿಬಾನ್ ಕೈಗೆ ಸಿಲುಕಿದ ನಂತರ ಪ್ರಪಾತಕ್ಕೆ ಧುಮುಕಿದೆ. ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡ ನಂತರ ಕಳೆದ ತಿಂಗಳ 15 ರಂದು ವಿದೇಶಿ ನೆರವನ್ನು ನಿಲ್ಲಿಸಲಾಯಿತು.

📣 ಇನ್ನಷ್ಟು ಕನ್ನಡ ವರ್ಲ್ಡ್ ನ್ಯೂಸ್ ಗಳಿಗಾಗಿ World News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today