ರಷ್ಯಾದ ವಿಮಾನ ಪತನ, 16 ಸಾವು

Russian plane crashes: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ವಿಮಾನದ ಎಡ ಎಂಜಿನ್ ನೆಲದಿಂದ 70 ಮೀಟರ್ ಎತ್ತರದಲ್ಲಿದ್ದಾಗ ವೈಫಲ್ಯಗೊಂಡಿರುವುದನ್ನು ಪೈಲಟ್‌ಗಳು ಗಮನಿಸಿದ್ದರು.

ಮಾಸ್ಕೋ: ರಷ್ಯಾದಲ್ಲಿ ವಿಮಾನ ಅಪಘಾತ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ಮಧ್ಯ ರಷ್ಯಾದ ಮಿನ್ಸ್ಕ್ ನಗರದಲ್ಲಿ ಈ ಘಟನೆ ನಡೆದಿದೆ. 23 ಪ್ರಯಾಣಿಕರನ್ನು ಹೊತ್ತ ಲಘು ವಿಮಾನ LET L-410, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ವಿಮಾನದ ಎಡ ಎಂಜಿನ್ ನೆಲದಿಂದ 70 ಮೀಟರ್ ಎತ್ತರದಲ್ಲಿದ್ದಾಗ ವೈಫಲ್ಯಗೊಂಡಿರುವುದನ್ನು ಪೈಲಟ್‌ಗಳು ಗಮನಿಸಿದ್ದರು. ಮೆನ್ಸೆಲಿನ್ಸ್ಕ್ ಪಟ್ಟಣದ ಬಳಿ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದರು.

ಆದರೆ, ಅಲ್ಲೇ ನಿಂತಿದ್ದ ಟ್ರಕ್ ಗೆ ವಿಮಾನದ ರೆಕ್ಕೆ ಡಿಕ್ಕಿ ಬಡೆದಿದೆ. ವಿಮಾನವು ಎರಡು ಭಾಗವಾಗಿ ತುಂಡಾಗಿದೆ ಮತ್ತು ಮುಂಭಾಗವು ಹಾನಿಗೊಳಗಾಯಿತು. ಅಪಘಾತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ಸಚಿವಾಲಯ ಹೇಳಿದೆ.

ಕಳೆದ ಮೂರು ತಿಂಗಳಲ್ಲಿ ರಷ್ಯಾದಲ್ಲಿ ನಡೆದ ಮೂರನೇ ವಿಮಾನ ಅಪಘಾತ ಇದಾಗಿದೆ.

Stay updated with us for all News in Kannada at Facebook | Twitter
Scroll Down To More News Today