ಶಾಕಿಂಗ್, ಮಹಿಳೆಯ ಪ್ರಾಣ, ಮಾನ ಕಾಪಾಡಿದ ಕೊರೋನಾ ವೈರಸ್

Shocking, coronavirus Saved a woman's life

ಕನ್ನಡ ನ್ಯೂಸ್ ಟುಡೇWorld News

ಚೀನಾ : ಮಾರಕ ಕೊರೋನಾವೈರಸ್ ಗೆ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಂಡು, ಸಾವಿರಾರು ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇದೆ ಕೊರೋನಾವೈರಸ್ ಒಬ್ಬ ಮಹಿಳೆಯನ್ನು ಕಾಮಾಂಧ ಪುರುಷನ ಹಿಡಿತದಿಂದ ರಕ್ಷಿಸಿದೆ. ಈ ಘಟನೆ ಚೀನಾದಲ್ಲಿ ನಡೆಡಿದ್ದು. ಚೀನಾದ ಜಿಂಗ್‌ಶಾನ್ ನಗರದಲ್ಲಿ ಯುವತಿಯೊಬ್ಬಳು ಏಕಾಂಗಿಯಾಗಿ ವಾಸಿಸುತ್ತಿದ್ದಳು, ಏಕಾಏಕಿ ಯುವಕನೊಬ್ಬ ಆಕೆಯ ಮನೆಗೆ ನುಗ್ಗಿ ಬೆದರಿಕೆ ಹಾಕಿ ಆಭರಣ ಮತ್ತು ಹಣವನ್ನು ಕದ್ದಿದ್ದ.

ನಂತರ ಅವನು ಅವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ನನ್ನ ಆಸೆ ಈಡೇರಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿ ಸಮಯೋಚಿತವಾಗಿ ಅವನ ಹತ್ತಿರ ನಯವಾಗಿ ನಟಿಸಿ, ಕೆಮ್ಮಲು ಪ್ರಾರಂಭಿಸಿದ್ದಾಳೆ, ಏನಾಯಿತು ಎಂದು ಅವರು ಕೇಳಿದಾಗ, ಆಕೆ ತಾನು ಕೆಲ ದಿನಗಳ ಹಿಂದೆ ವುಹಾನ್‌ನಿಂದ ಬಂದಿದ್ದೇನೆ ಮತ್ತು ಕೋರೋನವೈರಸ್ ಸೋಂಕಿಗೆ ಒಳಗಾದ ನಂತರ ಕುಟುಂಬ ನನ್ನನ್ನು ಏಕಾಂಗಿಯಾಗಿ ಇಲ್ಲಿ ಬಿಟ್ಟು ಬೇರೆಡೆ ನೆಲೆಸಿದ್ದಾರೆ ಎಂದು ಹೇಳಿದ್ದಾಳೆ.

ಗಾಬರಿಯಾದ ಕಾಮುಕ ಅವಳನ್ನು ಬಿಟ್ಟು ಓಡಿಹೋಗಿದ್ದಾನೆ. ಸಂತ್ರಸ್ತೆ ಕೂಡಲೇ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ವಿವರಗಳ ಜೊತೆಗೆ ಕ್ಯಾಮೆರಾಗಳ ತುಣುಕನ್ನು ಆಧರಿಸಿ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ.

Quick Links : Shocking, coronavirus Saved a woman’s life
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.