ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ, ರಿಯಾದ್ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿದ ಕಾರ್ಯಕರ್ತರ ಸಮಾವೇಶದ ಅಂಗವಾಗಿ ಕಾರ್ಯಕರ್ತರ ಕ್ರೀಡಾಕೂಟ ಹಾಗೂ ಸದಸ್ಯತ್ವ ಅಭಿಯಾನವನ್ನು ರಿಯಾದಿನ ಅಲ್-ಸಬಾಭ ನೂರ್ ಸಭಾಂಗಣದಲ್ಲಿ ನಡೆಯಿತು.
ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಕಷ್ಟಗಳ ಸ್ಪಂದನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಇಂಡಿಯನ್ ಸೋಶಿಯಲ್ ಫೋರಂ ಸಂಘಟನೆಯ ಸದಸ್ಯತ್ವ ಸ್ವೀಕರಿಸಲು ಉತ್ಸುಕತೆಯಲ್ಲಿದ್ದ ಅನಿವಾಸಿ ಕನ್ನಡಿಗರು ಭಾಗವಹಿಸಿದ್ದ ಕಾರ್ಯಕ್ರಮವನ್ನು ಇಂಡಿಯನ್ ಸೋಶಿಯಲ್ ಫೋರಂ, ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ರವರು ಉದ್ಘಾಟಿಸಿ ಹೊಸ ಸದಸ್ಯರಿಗೆ ಶುಭಹಾರೈಸಿದರು.
ಕಾರ್ಯಕರ್ತರ ಸಮಾವೇಶದಲ್ಲಿ ವಿಷಯ ಮಂಡನೆ ಮಾಡಿದ ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುಹಮ್ಮದ್ ನವೀದ್ ಪ್ರಸಕ್ತ ಭಾರತದ ಚಿತ್ರಣವನ್ನು ಕಾರ್ಯಕರ್ತರ ಮುಂದಿಟ್ಟರು. ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆಗೈದು ಅಧಿಕಾರವನ್ನು ಸ್ವೀಕರಿಸಿದ ಬಿಜೆಪಿ ಸರಕಾರವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಲ್ಲವಾಗಿಸಲು ಹವಣಿಸುತ್ತಿದೆ, ರಾಜಕೀಯ ಸಭಲೀಕರಣದಿಂದ ಮಾತ್ರ ವಿವಿಧತೆಯಲ್ಲಿರುವ ಭಾರತದ ಎಲ್ಲಾ ವರ್ಗದ ಜನರ ಅಭಿವೃದ್ದಿ ಸಾಧ್ಯವೆಂದು ತಿಳಿಸಿದರು.
ಇದೇ ವೇಳೆ ಇಂಡಿಯನ್ ಸೋಶಿಯಲ್ ಫೋರಂ ಕಳೆದ ಮೂರು ತಿಂಗಳಲ್ಲಿ ತೊಡಗಿಸಿಕೊಂಡಂತಹ ಸಾಮಾಜಿಕ ಸೇವಾ ಕಾರ್ಯಗಳ ವರದಿಯನ್ನು ಮಿಹಾಫ್ ಸುಲ್ತಾನ್ ರವರು ಪ್ರದರ್ಶಿಸಿದರು.
ಕಾರ್ಯಕರ್ತರಿಗಾಗಿ ಆಯೋಜಿಸಿದ ಕೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿ.ಸಿ.ರೋಡ್ ಗೈಸ್ ಪ್ರಥಮ ಸ್ಥಾನ ಪಡೆದರೆ, ಗಮ್ಮತ್ ಗೈಸ್ ದ್ವಿತೀಯ ಸ್ಥಾನ ಪಡೆದರು. ಪೆನಲ್ಟಿ ಶೂಟ್ ಪಂದ್ಯಾವಳಿಯಲ್ಲಿ ಸುರತ್ಕಲ್ ಸ್ಟ್ರೈಕರ್ಸ್ ಪ್ರಥಮ ಸ್ಥಾನ ಪಡೆದರೆ ಬಸ್ರೂರ್ ಗೈಸ್ ದ್ವಿತೀಯ ಪ್ರಶಸ್ತಿಗೆ ಭಾಜನರಾದರು.
ಇದೇ ಸಂಧರ್ಭದಲ್ಲಿ ಕುರಾನ್ ಕಂಠಪಾಠ ಮಾಡಿದಂತಹ ಕನ್ನಡಿಗ ವಿಧ್ಯಾರ್ಥಿಗಳಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ, ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿಗಳಾದ ಅಝ್ಘರ್ ಅಬೂಬಕರ್, ಜವಾದ್ ಬಸ್ರೂರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಹಮ್ಮದ್ ಮುಲ್ಕಿ ನಿರೂಪಿಸಿದರೆ, ನಿಹಾನ್ ಕುಂದಾಪುರ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಗೈದರು.
Sports Meet And Membership Campaign by Indian Social Forum Riyadh
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.