Strange Animal, ಎರಡು ಕಾಲುಗಳ ವಿಚಿತ್ರ ಜೀವಿ ಪತ್ತೆ, ಕ್ಯಾಮೆರಾ ಕಣ್ಣಿಗೆ ಬಿದ್ದ ಫೋಟೋ
Strange Animal : ಮನುಷ್ಯನಿಗೆ ಸಿಗದ ಪ್ರಾಣಿಗಳು ಜಗತ್ತಿನಲ್ಲಿ ಇನ್ನೂ ಸಾಕಷ್ಟಿವೆ ಎಂದು ಕೆಲವರು ಹೇಳುತ್ತಾರೆ. ಇದೀಗ ಈ ಹೇಳಿಕೆಗಳಿಗೆ ಪುಷ್ಟಿ ನೀಡುವ ಫೋಟೋವೊಂದು ವೈರಲ್ ಆಗಿದೆ.
Strange Animal : ಮನುಷ್ಯನಿಗೆ ಸಿಗದ ಪ್ರಾಣಿಗಳು ಜಗತ್ತಿನಲ್ಲಿ ಇನ್ನೂ ಸಾಕಷ್ಟಿವೆ ಎಂದು ಕೆಲವರು ಹೇಳುತ್ತಾರೆ. ಇದೀಗ ಈ ಹೇಳಿಕೆಗಳಿಗೆ ಪುಷ್ಟಿ ನೀಡುವ ಫೋಟೋವೊಂದು ವೈರಲ್ ಆಗಿದೆ. ಈ ಘಟನೆ ಅಮೆರಿಕದ ಟೆಕ್ಸಾಸ್ ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಅಮರಿ ಪಟ್ಟಣದಲ್ಲಿ ಮೃಗಾಲಯವಿದೆ. ಮೃಗಾಲಯದ ಮುಂಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ವಿಚಿತ್ರ ಜೀವಿಯೊಂದು ಕಾಣಿಸಿಕೊಂಡಿದೆ.
ಎರಡು ಕಾಲುಗಳ ಮೇಲೆ ನಿಂತಿರುವ ಜೀವಿ. ಈ ಫೋಟೋ ನೋಡಿದ ನೆಟ್ಟಿಗರು ಇದು ನಿಜಕ್ಕೂ ವಿಚಿತ್ರ ಜೀವಿಯೆ? ಅಥವಾ ಅಂತಹ ರೂಪದಲ್ಲಿ ಯಾರಾದರೂ ಮನುಷ್ಯರು ಬಂದಿದ್ದಾರೆಯೇ? ಎಂದು ತಲೆಕೆಡಿಸಿಕೊಂಡಿದ್ದಾರೆ. ಕಳೆದ ತಿಂಗಳ 21ರ ಮಧ್ಯರಾತ್ರಿ ಈ ಜೀವಿ ಹಲವು ಬಾರಿ ಇಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Strange Animal Walking On Two Feet Spotted
Follow Us on : Google News | Facebook | Twitter | YouTube