ತಾಲಿಬಾನ್ ಗೆ ಭಾರೀ ಆಘಾತ; ಆತ್ಮಾಹುತಿ ದಾಳಿಯಲ್ಲಿ ಹಕ್ಕಾನಿ ಸಾವು
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಜಿಲ್ಲೆಯ ಶಾಲೆಯೊಂದರಲ್ಲಿ ಗುರುವಾರ ನಡೆದ ಸ್ಫೋಟದಲ್ಲಿ ತಾಲಿಬಾನ್ ಧರ್ಮಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಸಾವನ್ನಪ್ಪಿದ್ದಾರೆ.
ಕಾಬೂಲ್: ತಾಲಿಬಾನ್ ತೀವ್ರ ಹಿನ್ನಡೆ ಅನುಭವಿಸಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಜಿಲ್ಲೆಯ ಶಾಲೆಯೊಂದರಲ್ಲಿ ಗುರುವಾರ ನಡೆದ ಸ್ಫೋಟದಲ್ಲಿ ತಾಲಿಬಾನ್ ಧರ್ಮಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಸಾವನ್ನಪ್ಪಿದ್ದಾರೆ. ಇಸ್ಲಾಮಿಕ್ ಎಮಿರೇಟ್ ಉಪ ಪ್ರತಿನಿಧಿ ಬಿಲಾಲ್ ಕರಿಮಿ ಹುಕ್ಕಾನಿ ಸಾವನ್ನು ಖಚಿತಪಡಿಸಿದ್ದಾರೆ. ಧಾರ್ಮಿಕ ಬೋಧಕ ಶೇಖ್ ರಹೀಮುಲ್ಲಾ ಹಕ್ಕಾನಿ ಶಾಲೆಯ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು.
ಅವರ ಸಾವನ್ನು ಇಸ್ಲಾಮಿಕ್ ಎಮಿರೇಟ್‌ನ ಉಪ ಪ್ರತಿನಿಧಿ ಬಿಲಾಲ್ ಕರಿಮಿ ಖಚಿತಪಡಿಸಿದ್ದಾರೆ ಎಂದು ಟೋಲೋ ನ್ಯೂಸ್ ಟ್ವೀಟ್ ಮಾಡಿದೆ. ಇತ್ತೀಚೆಗೆ ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಕೃತಕ ಕಾಲಿನಲ್ಲಿ ಸ್ಫೋಟಕಗಳನ್ನು ಅಳವಡಿಸಿ ಕಾಬೂಲ್ ಶಾಲೆಯೊಂದರಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ಸುದ್ದಿಸಂಸ್ಥೆ ತಿಳಿಸಿದೆ. ಆದರೆ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
taliban cleric sheikh rahimullah haqqani killed in suicide blast in kabul
Follow us On
Google News |
Advertisement