ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಸಿಕಂ ಒಳಗೆ ಇತ್ತು ಜೀವಂತ ಕಪ್ಪೆ, ಬೆಚ್ಚಿ ಬಿದ್ದ ಗೃಹಿಣಿ

The woman Finds Frog Inside A Capsicum While Cooking Dinner

KNT [ Kannada News Today ] : World News

Viral Topic : ಕೆನಡಾದ ದಂಪತಿಗಳು ರಾತ್ರಿ ಅಡುಗೆ ಮಾಡುವಾಗ ಕ್ಯಾಪ್ಸಿಕಂ ಒಳಗೆ ಜೀವಂತ ಕಪ್ಪೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ, ಒಳ ಹೋಗಲು ಎಲ್ಲೂ ಜಾಗವಿಲ್ಲ, ಹಾಗೂ ಕ್ಯಾಪ್ಸಿಕಂ ಸಹ ಪ್ರೆಶ್ ಆಗಿತ್ತು. ಆದರೆ ಇದು ಒಳ ಹೋದದ್ದಾದರೂ ಹೇಗೆ, ಈ ಬಗ್ಗೆ ಆ ದಂಪತಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ನೆಟಿಜನ್‌ಗಳು ಆಶ್ಚರ್ಯಕ್ಕೊಳಗಾಗಿದ್ದಾರೆ.

The woman Finds Frog Inside A Capsicum While Cooking Dinner - world news in kannada- viral news

ಕ್ವಿಬೆಕ್‌ನ ಸಗುಯೆನೆ ಮೂಲದ ನಿಕೋಲ್ ಗಾಗ್ನೊನ್ ಮತ್ತು ಗೆರಾರ್ಡ್ ಬ್ಲ್ಯಾಕ್‌ಬರ್ನ್ ಅವರು ದೊಡ್ಡ ಮೆಣಸಿನಕಾಯಿ ಕತ್ತರಿಸಿ ಅಡುಗೆ ಮಾಡುವಾಗ, ಒಳಗೆ ಜೀವಂತ ಕಪ್ಪೆ ಕಂಡು ನಿಜಕ್ಕೂ ಆಶ್ಚರ್ಯಗೊಂಡಿದ್ದಾರೆ. ಅವರ ಆಶ್ಚರ್ಯಕ್ಕೆ ಕಾರಣ ಅದು ಅಲ್ಲಿಗೆ ಹೋದದ್ದಾದರೂ ಹೇಗೆ ?

ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಸಿಕಂ ಒಳಗೆ ಇತ್ತು ಜೀವಂತ ಕಪ್ಪೆ, ಬೆಚ್ಚಿ ಬಿದ್ದ ಗೃಹಿಣಿ
ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಸಿಕಂ ಒಳಗೆ ಇತ್ತು ಜೀವಂತ ಕಪ್ಪೆ, ಬೆಚ್ಚಿ ಬಿದ್ದ ಗೃಹಿಣಿ

ಸ್ಥಳೀಯ ಸೂಪರ್‌ ಮಾರ್ಕೆಟ್‌ನಲ್ಲಿ ಇದನ್ನು ಖರೀದಿಸಿರುವುದಾಗಿ ದಂಪತಿಗಳು ತಿಳಿಸಿದ್ದಾರೆ. ಹಾಗೂ ಅದು ಪ್ರೆಶ್ ಆಗಿತ್ತು, ಯಾವುದೇ ಹೊಡೆದ ಕುರುಹು ಇರಲಿಲ್ಲ ಎಂದಿದ್ದಾರೆ. ಅವರ ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ಗೊಂದಲಕ್ಕೊಳಗಾಗಿದೆ.

ಒಬ್ಬೊಬ್ಬರು ಒಂದೊಂದು ರೀತಿಯ ಕಾಮೆಂಟ್ ಮಾಡಿ, ಒಬ್ಬರು, ಬಾಳೆ ಹಣ್ಣಿನಲ್ಲಿ ನಾನು ಸಹ ಒಂದು ಕೀಟ ನೋಡಿದೆ, ಆ ನಂತರ ಎರಡು ವರ್ಷ ಬಾಳೆ ಹಣ್ಣು ತಿಂದಿಲ್ಲ ” ಎಂದರೆ, ಇನ್ನೊಬ್ಬರು ನಾನು ಸಹ ಒಂದು ಹಣ್ಣಿನಲ್ಲಿ ಒಂದು ಕೀಟ ನೋಡಿದ್ದೇನೆ, ಎಂದು ಒಬ್ಬೊಬ್ಬರು ಒಂದೊಂದು ಪ್ರತಿಕ್ರಿಯೆ ನೀಡಿದ್ದಾರೆ.

Web Title : The woman Finds Frog Inside A Capsicum While Cooking Dinner
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)