Workers Rescued: ಚಾಕೊಲೇಟ್ ಟ್ಯಾಂಕ್ಗೆ ಬಿದ್ದ ಇಬ್ಬರು ಕಾರ್ಮಿಕರು ! ಆಮೇಲೆ ಆಗಿದ್ದೇನು ?
Workers Rescued: ಚಾಕೊಲೇಟ್ ತಯಾರಿಸುವ ಕಾರ್ಖಾನೆಯೊಂದರಲ್ಲಿ ಇಬ್ಬರು ಕಾರ್ಮಿಕರು ಆಕಸ್ಮಿಕವಾಗಿ ಚಾಕೊಲೇಟ್ ಟ್ಯಾಂಕ್ಗೆ ಬಿದ್ದಿದ್ದಾರೆ.
Workers Rescued – ವಾಷಿಂಗ್ಟನ್: ಚಾಕೊಲೇಟ್ ತಯಾರಿಸುವ ಕಾರ್ಖಾನೆಯೊಂದರಲ್ಲಿ ಇಬ್ಬರು ಕಾರ್ಮಿಕರು ಆಕಸ್ಮಿಕವಾಗಿ ಚಾಕೊಲೇಟ್ ಟ್ಯಾಂಕ್ಗೆ ಬಿದ್ದಿದ್ದಾರೆ. ಸೊಂಟದ ಆಳದ ಚಾಕೊಲೇಟ್ ಟ್ಯಾಂಕ್ನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಎಲಿಜಬೆತ್ ಟೌನ್ನಲ್ಲಿರುವ ಮಾರ್ಸ್ ಚಾಕೊಲೇಟ್ ಕಾರ್ಖಾನೆಯ ಇಬ್ಬರು ಕಾರ್ಮಿಕರು ಚಾಕೊಲೇಟ್ ಟ್ಯಾಂಕ್ನಲ್ಲಿ ಬಿದ್ದಿದ್ದರು. ಘಟನೆಯನ್ನು ತುರ್ತು ಸಂಖ್ಯೆ 911 ಗೆ ತಿಳಿಸಲಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಕಾರ್ಖಾನೆಗೆ ಧಾವಿಸಿದರು. ಚಾಕೊಲೇಟ್ ಟ್ಯಾಂಕ್ಗೆ ಬಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ನೇರವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಚಾಕೊಲೇಟ್ ತೊಟ್ಟಿಯಲ್ಲಿ ರಂಧ್ರವನ್ನು ಕೊರೆಯಲಾಯಿತು.
ಅದರಲ್ಲಿ ಸ್ವಲ್ಪ ಚಾಕೊಲೇಟ್ ಮಿಶ್ರಣವನ್ನು ಹೊರ ತೆಗೆದ ನಂತರ ಇಬ್ಬರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಪ್ರಮುಖ ಚಾಕೊಲೇಟ್ ತಯಾರಕ ಮಾರ್ಸ್ ಘಟನೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
Workers Fall Into Chocolate Tank At Mars Factory In Us Rescued From Waist Deep Chocolate
Follow Us on : Google News | Facebook | Twitter | YouTube