ಮಧ್ಯರಾತ್ರಿ ನೀರು ಕುಡಿಯಲು ಎದ್ದ ಬೆಂಗಳೂರು ಟೆಕ್ಕಿ ಸಾವು

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಮರ್ಥ (26) ಹೃದಯಾಘಾತದಿಂದ ಮೃತಪಟ್ಟಿದ್ದಾರೆ

- - - - - - - - - - - - - Story - - - - - - - - - - - - -

ಬೆಂಗಳೂರು (Bengaluru): ನಿದ್ರೆಯಿಂದ ಎದ್ದ ಟೆಕ್ಕಿ ನೀರು ಕುಡಿಯುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ರಾಮೇನಹಳ್ಳಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಮರ್ಥ (26) ಕೆಲಸದ ನಿಮಿತ್ತ ಹಳ್ಳಿಯಲ್ಲೇ ಉಳಿದುಕೊಂಡಿದ್ದಾರೆ. ಭಾನುವಾರ ಮಧ್ಯರಾತ್ರಿ ನಿದ್ದೆಯಿಂದ ಎದ್ದು ನೀರು ಕುಡಿದಿದ್ದರು.

ಕೂಡಲೇ ತನ್ನ ತಾಯಿ ಮತ್ತು ಪತ್ನಿಗೆ ಕರೆ ಮಾಡಿ ಎದೆಭಾಗದಲ್ಲಿ ನೋವಾಗುತ್ತಿದೆ ಎಂದು ಹೇಳಿ ಕುಸಿದು ಬಿದ್ದಿದ್ದಾರೆ. ವೈದ್ಯರಿಗೆ ಕರೆ ಮಾಡಿ ತಪಾಸಣೆ ನಡೆಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಹಠಾತ್ ದುರಂತದಿಂದ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿತ್ತು.

ಮಧ್ಯರಾತ್ರಿ ನೀರು ಕುಡಿಯಲು ಎದ್ದ ಬೆಂಗಳೂರು ಟೆಕ್ಕಿ ಸಾವು

26-Year-Old Bengaluru Techie Dies of Heart Attack While Drinking Water

Related Stories