Bangalore News

ಬೆಂಗಳೂರಿನಲ್ಲಿ 30 ಐಷಾರಾಮಿ ಕಾರುಗಳ ಜಪ್ತಿ: 3 ಕೋಟಿ ರೂ. ತೆರಿಗೆ ವಸೂಲಿ

ಸಂಚಾರ ಮಾಡುತ್ತಿದ್ದ ಫೆರಾರಿ, ಪೋರ್ಷೆ, ರೇಂಜ್ ರೋವರ್ ಸೇರಿದಂತೆ ಐಷಾರಾಮಿ ಕಾರುಗಳು ಜಪ್ತಿ, ತೆರಿಗೆ ಪಾವತಿ ಕುರಿತಂತೆ ಕ್ರಮ

  • 30 ಐಷಾರಾಮಿ ಕಾರುಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
  • ಇವು ಪಂಜಾಬ್, ದೆಹಲಿ, ಪುದುಚೇರಿ, ಮತ್ತು ಇತರ ರಾಜ್ಯಗಳಲ್ಲಿ ನೋಂದಣಿಯಾಗಿವೆ.
  • ಮೂರು ಕೋಟಿ ರೂ. ತೆರಿಗೆ ವಸೂಲು ಮಾಡುವ ನೋಟಿಸ್ ನೀಡಲಾಗಿದೆ.

ಬೆಂಗಳೂರು (Bengaluru): ನಗರದ ರಸ್ತೆಯ ಮೇಲೆ ಅನುಮತಿ ಇಲ್ಲದೆ ಸಂಚರಿಸುತ್ತಿದ್ದ ಐಷಾರಾಮಿ ಕಾರುಗಳನ್ನು ಸೋಮವಾರ ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದರು. ಫೆರಾರಿ, ಪೋರ್ಶೆ, ರೇಂಜ್ ರೋವರ್ ಮತ್ತು ಮಾಸೆರಾಟಿ ಸೇರಿದಂತೆ 30 ಐಷಾರಾಮಿ ಕಾರುಗಳು ಆಗಲೆ ಜಪ್ತಿ ಆಗಿದ್ದು, 3 ಕೋಟಿ ರೂಪಾಯಿ ತೆರಿಗೆ (tax) ವಸೂಲಿ ಮಾಡುವಂತೆ ನೋಟಿಸ್‌ಗಳನ್ನು ನೀಡಲಾಗಿದೆ.

ಈ ಕಾರ್ಯಾಚರಣೆ ಭದ್ರತಾ ದೃಷ್ಟಿಯಿಂದ ಹಾಗೂ ತೆರಿಗೆ ಅನುದಾನದಲ್ಲಿ ತಪ್ಪಿದ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ನಿರ್ವಹಿಸಿದ್ದಾರೆ.

30 Luxury Cars Seized by RTO in Bengaluru

ಈ ಬಾರಿ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ! ಟಫ್ ನಿಯಮಗಳು

ದೆಹಲಿ, ಪುದುಚೇರಿ, ಮಹಾರಾಷ್ಟ್ರ, ಹಾಗೂ ಉತ್ತರ ಪ್ರದೇಶದಿಂದ ನೋಂದಣಿಗೊಂಡಿರುವ ಈ ಕಾರುಗಳು, ಕಾರು ಮಾರುಕಟ್ಟೆ ನಿಯಮಗಳ ವಿರುದ್ಧ ಬೆಂಗಳೂರಿನಲ್ಲಿ ಅನಧಿಕೃತವಾಗಿ ಸಂಚರಿಸುತ್ತಿದ್ದವು.

ಅದರ ಜೊತೆಗೆ, ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಗಳಲ್ಲಿ 80 ಲಕ್ಷ ರೂ. ದಂಡ (fine) ವಸೂಲಿಯಾಗಿದೆ. ಇನ್ನು ಬೆಂಗಳೂರು ನಗರದಲ್ಲಿ ಕಳೆದ 1 ವಾರದಿಂದ 800 ಕ್ಕೂ ಹೆಚ್ಚು ವಾಹನಗಳು ಸೀಜ್ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್​​ ಮಾಹಿತಿ ನೀಡಿದ್ದಾರೆ.

30 Luxury Cars Seized by RTO in Bengaluru

English Summary

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories