ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ, ಯುವತಿಗೆ ಐದು ಇಂಜೆಕ್ಷನ್ ನೀಡಿದ ಕುಡುಕ ಡಾಕ್ಟರ್
ಕುಡಿದ ಅಮಲಿನಲ್ಲಿ ವೈದ್ಯ ಹಾಗೂ ಪುರುಷ ನರ್ಸ್ ಯುವತಿಗೆ 5 ಬಾರಿ ಇಂಜೆಕ್ಷನ್ ಹಾಕಿದ ಘಟನೆ ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು (Bengaluru): ಸ್ವಲ್ಪ ಯಾಮಾರಿದರೂ ನಮ್ಮ ಜೀವಕ್ಕೆ ನಾವೇ ಹೊಣೆಯಾಗುತ್ತೇವೆ, ಇಲ್ಲಿ ಸಹ ಅಂತಹದ್ದೇ ಘಟನೆ ನಡೆದಿದೆ, ಹೌದು, ಕುಡುಕ ಡಾಕ್ಟರ್ ಒಬ್ಬ ಮದ್ಯದ ನಶೆಯಲ್ಲಿ ಯುವತಿಗೆ ಒಂದಲ್ಲ, ಎರಡಲ್ಲ… ಐದು ಬಾರಿ ಇಂಜೆಕ್ಷನ್ ನೀಡಿದ್ದಾನೆ.
ಕುಡಿದ ಅಮಲಿನಲ್ಲಿ ವೈದ್ಯ ಹಾಗೂ ಪುರುಷ ನರ್ಸ್ ಯುವತಿಗೆ 5 ಬಾರಿ ಇಂಜೆಕ್ಷನ್ ಹಾಕಿದ ಘಟನೆ ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿರುವ (Kumaraswamy Layout) ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಇದೇ ತಿಂಗಳ 3ರಂದು ಯುವತಿ ಜ್ವರದಿಂದ ಖಾಸಗಿ ಆಸ್ಪತ್ರೆಗೆ (Private Hospital) ಹೋಗಿದ್ದಳು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಡಾ.ಪ್ರದೀಪ್ ಹಾಗೂ ಪುರುಷ ನರ್ಸ್ ಮಹೇಂದ್ರ ಯುವತಿಯ ಕೈ ಹಿಡಿದು ಇಂಜೆಕ್ಷನ್ ನೀಡಿದ್ದಾರೆ. ಬಳಿಕ ಡಾ.ಪ್ರದೀಪ್ ಯುವತಿಗೆ ಮತ್ತೊಂದು ಇಂಜೆಕ್ಷನ್ ನೀಡಿದ್ದಾರೆ.
ಇದೆ ರೀತಿ, ಯುವತಿಗೆ 5 ಬಾರಿ ಇಂಜೆಕ್ಷನ್ ನೀಡಲಾಗಿದೆ. ತನ್ನ ತೋಳು ಮತ್ತು ಸೊಂಟಕ್ಕೆ ಪದೇ ಪದೇ ಇಂಜೆಕ್ಷನ್ ನೀಡಿದ್ದರಿಂದ ಯುವತಿ ನೋವಿನಿಂದ ನರಳಿದ್ದಾಳೆ, ಕೊನೆಗೆ ಆಕೆಗೆ ಮದ್ಯದ ವಾಸನೆ ಬರುತ್ತಿದ್ದಂತೆ ವೈದ್ಯರನ್ನು ವಿಚಾರಿಸಿದ್ದು, ವೈದ್ಯರು ಅಲ್ಲಿಂದ ಓಡಿ ಹೋಗಿದ್ದಾರೆ.
ಯುವತಿಯೊಂದಿಗೆ ವೈದ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿವೆ. ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
a drunk doctor gave five injections to a young woman in Bengaluru