Bengaluru AQI: ಬೆಂಗಳೂರು, ಉಡುಪಿ ಹಾಗೂ ಮಂಗಳೂರು ಸೇರಿ ಕರ್ನಾಟಕ ಜಿಲ್ಲೆಗಳಲ್ಲಿ ಗಾಳಿ ಗುಣಮಟ್ಟ ಕುಸಿತ

Bengaluru AQI: ಬೆಂಗಳೂರು, ಉಡುಪಿ ಮತ್ತು ಮಂಗಳೂರಿನಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ. ಏರ್ ಕ್ವಾಲಿಟಿ ಇಂಡೆಕ್ಸ್ 100 ಮೀರಿದ ಹಿನ್ನೆಲೆಯಲ್ಲಿ ಶ್ವಾಸಕೋಶ ಸಮಸ್ಯೆಗಳ ಆತಂಕ ಹೆಚ್ಚಿದ್ದು, ತಜ್ಞರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ನಾಗರಿಕರಿಗೆ ಸಲಹೆ ನೀಡಿದ್ದಾರೆ.

  • ಬೆಂಗಳೂರು ಏರ್ ಕ್ವಾಲಿಟಿ 124
  • ಮಂಗಳೂರು ಏರ್ ಕ್ವಾಲಿಟಿ 198
  • ಉಡುಪಿ ವಾಯು ಗುಣಮಟ್ಟ 170

ಬೆಂಗಳೂರು, ಫೆಬ್ರವರಿ 21: ರಾಜ್ಯ ರಾಜಧಾನಿ ಬೆಂಗಳೂರು (Bengaluru AQI) ಸೇರಿದಂತೆ ಕರಾವಳಿ ಭಾಗದ ನಗರಗಳಲ್ಲೂ ವಾಯು ಗುಣಮಟ್ಟ (Karnataka Air Quality) ಕುಸಿದಿರುವುದು ಆತಂಕ ಹುಟ್ಟಿಸಿದೆ.

ಕೆಲ ದಿನಗಳ ಹಿಂದಷ್ಟೇ ತೀವ್ರ ಕಳಪೆ ಮಟ್ಟ ತಲುಪಿದ್ದ ಬೆಂಗಳೂರಿನ ಗಾಳಿ ಗುಣಮಟ್ಟ ಈಗ 124ರ ಮಟ್ಟದಲ್ಲಿ ದಾಖಲಾಗಿದೆ. ಸಂಖ್ಯೆಯಲ್ಲಿ ಸಣ್ಣ ಇಳಿಕೆ ಕಂಡರೂ, ಆರೋಗ್ಯದ ದೃಷ್ಟಿಯಿಂದ ಇದು ಇನ್ನೂ ಕಳಪೆ ಮಟ್ಟದಲ್ಲೇ ಉಳಿದಿದೆ.

ಇದಕ್ಕಿಂತ ಹೆಚ್ಚಾಗಿ ಮಂಗಳೂರಿನ ಪರಿಸ್ಥಿತಿ ಗಮನಾರ್ಹವಾಗಿದೆ. ಏರ್ ಕ್ವಾಲಿಟಿ ಇಂಡೆಕ್ಸ್ 198ಕ್ಕೆ ತಲುಪಿದ್ದು, 200ರ ಗಡಿ ತಲುಪುವ ಹಂತದಲ್ಲಿದೆ. ಉಡುಪಿ ನಗರದಲ್ಲೂ 170 ಅಂಕಗಳೊಂದಿಗೆ ಗಾಳಿ ಗುಣಮಟ್ಟ ಅನಾರೋಗ್ಯಕರ ಹಂತದ ಅಂಚಿನಲ್ಲಿ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, 100 ಮೀರಿದ AQI ದೀರ್ಘಾವಧಿಯಲ್ಲಿ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದ ಇತರ ನಗರಗಳ ಇಂದಿನ ಗಾಳಿ ಗುಣಮಟ್ಟ

ರಾಜ್ಯದ ವಿವಿಧ ನಗರಗಳಲ್ಲಿ ದಾಖಲಾಗಿರುವ ಇಂದಿನ ಏರ್ ಕ್ವಾಲಿಟಿ ಇಂಡೆಕ್ಸ್ ವಿವರ ಹೀಗಿದೆ: ಬೆಂಗಳೂರಿನಲ್ಲಿ 124, ಮಂಗಳೂರಿನಲ್ಲಿ 198, ಮೈಸೂರಿನಲ್ಲಿ 144, ಬೆಳಗಾವಿಯಲ್ಲಿ 167, ಕಲಬುರ್ಗಿಯಲ್ಲಿ 129, ಶಿವಮೊಗ್ಗದಲ್ಲಿ 136, ಬಳ್ಳಾರಿಯಲ್ಲಿ 130, ಹುಬ್ಬಳ್ಳಿಯಲ್ಲಿ 152, ಉಡುಪಿಯಲ್ಲಿ 170 ಮತ್ತು ವಿಜಯಪುರದಲ್ಲಿ 119 ಅಂಕಗಳು ದಾಖಲಾಗಿವೆ. ಬಹುತೇಕ ನಗರಗಳು 100 ಮೀರಿರುವುದು ಪರಿಸ್ಥಿತಿ ಗಂಭೀರವಾಗುತ್ತಿರುವ ಸೂಚನೆ ನೀಡುತ್ತದೆ.

ಏರ್ ಕ್ವಾಲಿಟಿ ಇಂಡೆಕ್ಸ್ ಅರ್ಥ ಏನು?

ವಾಯು ಗುಣಮಟ್ಟವನ್ನು ಅಳೆಯಲು ಬಳಸುವ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಹಂತಗಳು ಹೀಗಿವೆ: 0-50 ಉತ್ತಮ, 50-100 ಮಧ್ಯಮ, 100-150 ಕಳಪೆ, 150-200 ಅನಾರೋಗ್ಯಕರ, 200-300 ಗಂಭೀರ ಹಾಗೂ 300 ಕ್ಕಿಂತ ಮೇಲಾಗಿದ್ರೆ ಅಪಾಯಕಾರಿ ಹಂತವೆಂದು ಪರಿಗಣಿಸಲಾಗುತ್ತದೆ.

ನಗರಗಳಲ್ಲಿ ವಾಹನ ದಟ್ಟಣೆ, ನಿರ್ಮಾಣ ಕಾಮಗಾರಿ ಧೂಳು ಮತ್ತು ಹವಾಮಾನ ಬದಲಾವಣೆಗಳ ಪರಿಣಾಮವಾಗಿ ಗಾಳಿ ಗುಣಮಟ್ಟ ಕುಸಿತ ಕಾಣುತ್ತಿದೆ. ವಿಶೇಷವಾಗಿ ಮಕ್ಕಳು, ಹಿರಿಯರು ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆ ಇರುವವರು ಮಾಸ್ಕ್ ಧರಿಸುವುದು ಹಾಗೂ ಅಗತ್ಯವಿದ್ದರೆ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories