ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ, ಇಡೀ ಸ್ಕೂಟರ್ ಭಸ್ಮ
ಬೆಂಗಳೂರು ನಗರದಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮವಾಗಿದೆ. ಕ್ಷಣಾರ್ಧದಲ್ಲಿ ಇಡೀ ಸ್ಕೂಟರ್ ಬೆಂಕಿ ಹೊತ್ತಿಕೊಂಡಿದೆ.
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಸುಟ್ಟು ಭಸ್ಮವಾಗಿದೆ. ನೋಡನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಆರ್ ಆರ್ ನಗರದ ಬೆಮೆಲ್ ಲೇಔಟ್ ನಲ್ಲಿ ಶಿವಾನಂದ್ ಎಂಬ ವ್ಯಕ್ತಿ ಶನಿವಾರ ಬೆಳಗ್ಗೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮನೆಯಿಂದ ಹೊರಟಿದ್ದರು.
ನಾಗರಬಾವಿ (Nagarabhavi) ಸಮೀಪ ಹೋಗುವಾಗ ಸ್ಕೂಟರ್‌ನಿಂದ ಹೊಗೆ ಬರಲಾರಂಭಿಸಿತು. ಇದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಾಗ ಸ್ಕೂಟರ್ ನಿಲ್ಲಿಸಿ ಪಕ್ಕಕ್ಕೆ ಸರಿದಿದ್ದಾರೆ. ಕ್ಷಣಾರ್ಧದಲ್ಲಿ ಇಡೀ ಸ್ಕೂಟರ್ ಬೆಂಕಿಯಿಂದ ಹೋಗೆ ದಟ್ಟವಾಗತೊಡಗಿದೆ.
ಸ್ಥಳೀಯರು ಬಂದು ಬೈಕ್‌ನಲ್ಲಿದ್ದ ಬ್ಯಾಟರಿ ಹೊರತೆಗೆದು ನೀರು ಸುರಿದು ಬೆಂಕಿ (Fire) ನಂದಿಸಲು ಯತ್ನಿಸಿದರಾದರೂ ವಿಫಲವಾಯಿತು. ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆರ್‌ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
An electric scooter caught fire in Bengaluru, the entire scooter was burnt