ಬೆಂಗಳೂರು ಬನ್ನೇರುಘಟ್ಟ ಬಳಿ ವಾಹನ ಡಿಕ್ಕಿಯಾಗಿ ಆನೆ ಸಾವು

Story Highlights

ಆನೆಗೆ ಅಪರಿಚಿತ ಭಾರಿ ವಾಹನ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದಿದೆ

ಬೆಂಗಳೂರು (Bengaluru): ಅರಣ್ಯದಿಂದ ರಸ್ತೆ ದಾಟುತ್ತಿದ್ದ ಆನೆಗೆ ಅಪರಿಚಿತ ಭಾರಿ ವಾಹನ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದಿದೆ. ರಾಮನಗರದ ಕಡೆಗೆ ಜಿಗಣಿ-ಹಾರೋಹಳ್ಳಿ ಮುಖ್ಯರಸ್ತೆಯ ಉರಗನದೊಡ್ಡಿಯಲ್ಲಿ ನಡೆದಿದೆ.

ಬನ್ನೇರುಘಟ್ಟ (Bannerghatta ) ಅಭಯಾರಣ್ಯದಿಂದ ಬಂದ ಆನೆ ಕಾಡಿನಿಂದ ಹೊರಬಂದು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ನಡೆದ ಘಟನೆಯನ್ನು ಸ್ಥಳೀಯರು ಗಮನಿಸಿದ್ದಾರೆ.

ಬನ್ನೇರುಘಟ್ಟ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದಾಗ ಆನೆ ಮೃತಪಟ್ಟಿತ್ತು. ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸುವಂತೆ ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸಿ ಈ ರೀತಿ ಡಿಕ್ಕಿ ಹೊಡೆಯುವುದರಿಂದ ಪ್ರಾಣಿಗಳು ಸಾಯುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ.

An elephant died in a vehicle collision near Bannerghatta, Bengaluru

Related Stories