ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ 680 ರೂ. ಜಮಾ, ಅಕೌಂಟ್ ಚೆಕ್ ಮಾಡಿಕೊಳ್ಳಿ
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಬದಲು ನಗದು ನೀಡಲಾಗುತ್ತಿರುವ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ? ತಿಳಿದುಕೊಳ್ಳಿ.
- ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ನಗದು ಜಮಾ
- ಜನವರಿ ತಿಂಗಳ ಅನ್ನಭಾಗ್ಯ ಯೋಜನೆಯ 680 ರೂ. ವರ್ಗಾವಣೆ
- DBT ಅಪ್ಲಿಕೇಶನ್ ಬಳಸಿ ಅಕೌಂಟ್ ಚೆಕ್ ಮಾಡಿಕೊಳ್ಳಿ
Annabhagya Scheme : ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲು ಉದ್ದೇಶಿಸಲಾಗಿತ್ತು. ಆದರೆ ಅಕ್ಕಿ ಕೊರತೆಯಿಂದ, ಈ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದ್ದು, 5 ಕೆಜಿ ಅಕ್ಕಿ ವಿತರಿಸಿ ಉಳಿದ 5 ಕೆಜಿ ಅಕ್ಕಿಗೆ ನಗದು ಸಹಾಯ ನೀಡಲಾಗುತ್ತಿದೆ.
680 ರೂಪಾಯಿ ಹಣ ಖಾತೆಗೆ ಜಮಾ:
ಅನ್ನಭಾಗ್ಯ ಯೋಜನೆಯಡಿ (Annabhagya Yojane) ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿ ಕೆಜಿಗೆ ₹34 ದರದಲ್ಲಿ 5 ಕೆಜಿ ಅಕ್ಕಿ ಬದಲು ₹170 ನಗದು ನೀಡಲಾಗುತ್ತಿದೆ. ಒಟ್ಟು 4 ತಿಂಗಳ ಹಣ ₹680 ಜನವರಿ 23 ರಿಂದ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.
3 ತಿಂಗಳ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಜಮಾ ಯಾವಾಗ? ಇಲ್ಲಿದೆ ಅಪ್ಡೇಟ್
ಹಣ ವರ್ಗಾವಣೆಯ ಪ್ರಕ್ರಿಯೆ:
ಈ ಹಣ ನೇರವಾಗಿ ಪಡಿತರ ಚೀಟಿಯ ಹೆಸರಿನಲ್ಲಿ ನೊಂದಾಯಿಸಿದ ಪ್ರಮುಖ ವ್ಯಕ್ತಿಯ ಬ್ಯಾಂಕ್ ಖಾತೆಗೆ (Bank Account) ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‌ಫರ್ (DBT) ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ.
ಹಣ ಜಮಾ ಆದ್ಧನ್ನು ಹೇಗೆ ಪರೀಕ್ಷಿಸಬಹುದು?
ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಜಾಲತಾಣಕ್ಕೆ (https://ahara.karnataka.gov.in/fcs_verify_bser/status_of_dbt_new.aspx) ತೆರಳಿ, ನಿಮ್ಮ ಜಿಲ್ಲಾ ಆಯ್ಕೆ ಮಾಡಿ, ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಮಾಹಿತಿ ಪಡೆಯಬಹುದು.
ಪಡಿತರ ಚೀಟಿ ತಿದ್ದುಪಡಿ ಅವಧಿ ವಿಸ್ತರಣೆ, ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ
ಹಣ ಜಮಾ ಸ್ಥಿತಿಯನ್ನು DBT ಅಪ್ಲಿಕೇಶನ್ ಮೂಲಕವೂ ಪರಿಶೀಲಿಸಬಹುದು. ಇದರ ಮೂಲಕ ನೀವು ಹಣ ವರ್ಗಾವಣೆ ಆಗಿದೆಯೇ ಎಂಬುದನ್ನು ಸುಲಭವಾಗಿ ತಿಳಿಯಬಹುದು.
Anna Bhagya Scheme DBT Amount Released
Our Whatsapp Channel is Live Now 👇