ಬೆಂಗಳೂರು ಜನತೆಗೆ ಮತ್ತೊಂದು ಹೊರೆ, ಕಸ ಸಂಗ್ರಹಣೆಗೆ ತೆರಿಗೆ ಸಂಗ್ರಹಿಸುವ ಸಾಧ್ಯತೆ
- ಕಸ ಸಂಗ್ರಹಣೆಗೆ ತೆರಿಗೆ ಸಂಗ್ರಹಿಸುವ ಸಾಧ್ಯತೆ
- ತಿಂಗಳಿಗೆ ರೂ.200ರಿಂದ ರೂ.400 ಸಂಗ್ರಹಿಸುವ ನಿರೀಕ್ಷೆ
- ಬಿಬಿಎಂಪಿ ಮಾಡಿದ ಮನವಿಗೆ ಈ ಹಿಂದೆ ಸರ್ಕಾರ ಒಪ್ಪಿರಲಿಲ್ಲ
ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಮನೆಯಿಂದ ಕಸ ಸಂಗ್ರಹಣೆಗೆ ತೆರಿಗೆ ಸಂಗ್ರಹಿಸುವ ಸಾಧ್ಯತೆ ಇದೆ. ಇದರಿಂದ ನಗರದ ಜನತೆಗೆ ಮತ್ತೊಂದು ಹೊರೆ ಬೀಳಬಹುದು. ತೆರಿಗೆ ಸಂಗ್ರಹದ ಕುರಿತು ಬಿಬಿಎಂಪಿ (BBMP) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪಾಲಿಕೆ ವ್ಯಾಪ್ತಿಯ 46 ಲಕ್ಷ ಮನೆಗಳಿಂದ 2025ರಿಂದ ಕಸದ ತೆರಿಗೆ ಸಂಗ್ರಹ ಆರಂಭಿಸಲು ಚಿಂತನೆ ನಡೆಸಿದೆ. ಈ ಹಿಂದೆ ತೆರಿಗೆ ಸಂಗ್ರಹಿಸುವಂತೆ ಬಿಬಿಎಂಪಿ ಮಾಡಿದ ಮನವಿಗೆ ಸರ್ಕಾರ ಒಪ್ಪಿರಲಿಲ್ಲ.
ಪ್ರತಿ ಮನೆಯಿಂದ ತಿಂಗಳಿಗೆ ರೂ.200ರಿಂದ ರೂ.400 ಸಂಗ್ರಹಿಸುವ ನಿರೀಕ್ಷೆ ಇದೆ. ಇದರಿಂದ ಅಪಾರ ಆದಾಯ ಬರಲಿದೆ. ನಗರದಲ್ಲಿ ಕಸ ಸಂಗ್ರಹಣೆಗೆ ಬಿಬಿಎಂಪಿ ಟೆಂಡರ್ ಕರೆದಿದೆ. ಒಣ ತ್ಯಾಜ್ಯ ನಿರ್ವಹಣೆಗೆ ಕಸ ವಿಲೇವಾರಿ ಹೊಸ ವ್ಯವಸ್ಥೆ ಜಾರಿಗೆ ತರಲು ಟೆಂಡರ್ ಕರೆಯಲಾಗಿದೆ.
ಮನೆಗಳಿಂದ ಕಸವನ್ನು ವರ್ಗಾವಣೆ ಕೇಂದ್ರಗಳಿಗೆ ಮತ್ತು ಅಲ್ಲಿಂದ ಸಂಸ್ಕರಣಾ ಘಟಕಗಳಿಗೆ ಸಾಗಿಸಲಾಗುತ್ತದೆ. ಪ್ರತಿ ಮನೆಯಿಂದ ಕಸ ಸಂಗ್ರಹಿಸುವುದರಿಂದ ಕಸದ ಸಮಸ್ಯೆ ಕಡಿಮೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
Another burden for the people of Bengaluru, possibility of collecting taxes for garbage collection