ರಾಜ್ಯದಲ್ಲಿ ಹೊಸ BPL ಮತ್ತು APL ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ ಆರಂಭ

ರಾಜ್ಯದಲ್ಲಿ ಹೊಸ BPL ಮತ್ತು APL ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಆಗಸ್ಟ್ 31ರವರೆಗೆ ಅರ್ಜಿ ಸಲ್ಲಿಸಬಹುದು.

  • ಹೊಸ BPL, APL ರೇಷನ್ ಕಾರ್ಡ್‌ಗಳಿಗೆ ಅರ್ಜಿ ಆರಂಭ
  • ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಸಾಧ್ಯ
  • ಅಗತ್ಯ ದಾಖಲೆಗಳ ಪಟ್ಟಿ ಹಾಗೂ ಅರ್ಜಿ ವಿಧಾನ ಪ್ರಕಟ

ಬೆಂಗಳೂರು (Bengaluru): ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದೀಗ ಹೊಸ BPL ಮತ್ತು APL ರೇಷನ್ ಕಾರ್ಡ್‌ಗಳಿಗೆ (Ration Card) ಅರ್ಜಿ ಸ್ವೀಕಾರ ಆರಂಭಿಸಿದೆ. ಈ ಸೇವೆ ಆಗಸ್ಟ್ 1ರಿಂದ ಆರಂಭಗೊಂಡಿದ್ದು, ಅರ್ಜಿದಾರರು ಆಗಸ್ಟ್ 31, 2025ರೊಳಗೆ ಅರ್ಜಿ ಸಲ್ಲಿಸಬಹುದು.

ರೇಷನ್ ಕಾರ್ಡ್‌ಗಳ ನವೀಕರಣ, ತಿದ್ದುಪಡಿ ಮತ್ತು ಸದಸ್ಯರ ಸೇರ್ಪಡೆ ಸೇರಿದಂತೆ ಹಲವಾರು ಬದಲಾವಣೆಗಳಿಗೆ ಈಗ ಅರ್ಜಿ ಹಾಕಬಹುದಾಗಿದೆ. ಹೊಸದಾಗಿ ಕಾರ್ಡ್ ಬೇಕಾದವರು ಅಥವಾ ಕಾರ್ಡ್‌ನಲ್ಲಿನ ಮಾಹಿತಿ ತಿದ್ದುಪಡಿ ಮಾಡಬೇಕಾದವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸುಲಭವಾಗಿ ಮುಗಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್ (https://ahara.kar.nic.in) ಮೂಲಕ ನೀವು ಇ-ಸೇವೆಗಳ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ನೀವು ಬೆಂಗಳೂರಿನ “ಒನ್ ಸೆಂಟರ್‌” ಅಥವಾ ಸೈಬರ್ ಕಫೆಗಳನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್, ವಿಳಾಸದ ಪುರಾವೆ, ಆದಾಯ ಪ್ರಮಾಣಪತ್ರ, ಹಾಗೂ ಮಕ್ಕಳ ಜನನ ಪ್ರಮಾಣಪತ್ರ, ಮದುವೆಯಾದ ಮಹಿಳೆಯರಿಗಾಗಿ ಮದುವೆ ಪ್ರಮಾಣಪತ್ರ ಹಾಗೂ ಪತಿ ರೇಷನ್ ಕಾರ್ಡ್ ನಕಲು ಸೇರಿವೆ.

BPL Ration Card

ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ, ಅಥವಾ ಮೃತ ಸದಸ್ಯರ ಹೆಸರನ್ನು ತೆಗೆದುಹಾಕುವಂತಹ ತಿದ್ದುಪಡಿಗಳಿಗೂ ಈ ಸಮಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಮುನ್ನ, ಎಲ್ಲಾ ದಾಖಲೆಗಳು ಸರಿಯಾಗಿ ಸಿದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಬಹಳ ಅಗತ್ಯ. ನೋಂದಣಿ ಸಂಖ್ಯೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು, ಏಕೆಂದರೆ ಆ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ತಪಾಸಿಸಬಹುದು.

ಇನ್ನೊಂದೆ ಕಡೆ, ಅರ್ಜಿ ಅನುಮೋದನೆಯಾದ ನಂತರ ಹೊಸ ರೇಷನ್ ಕಾರ್ಡ್ ನಕಲನ್ನು ಹತ್ತಿರದ ರೇಷನ್ ಅಂಗಡಿಯಿಂದ ಪಡೆದುಕೊಳ್ಳಬಹುದು. ಯಾವುದೇ ತೊಂದರೆ ಎದುರಾದರೆ, ಆಹಾರ ಇಲಾಖೆಯ ಹೆಲ್ಪ್‌ಲೈನ್ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು.

ಇದೆ ರೀತಿಯ ಮಾಹಿತಿ ಇನ್ನಷ್ಟು ಪಡೆಯಲು Kannada News Today ವೆಬ್‌ಸೈಟ್ ವೀಕ್ಷಿಸಿ.

Application Opens for New Ration Cards in Karnataka

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories