ಗಂಗಾ ಕಲ್ಯಾಣ, ಸಾರಥಿ, ಭೂ ಒಡೆತನ, ಸ್ವಾವಲಂಬಿ ಯೋಜನೆಗಳಿಗೆ ಅರ್ಜಿ ಆಹ್ವಾನ - Karnataka Schemes

ಗಂಗಾ ಕಲ್ಯಾಣ, ಸಾರಥಿ, ಭೂ ಒಡೆತನ, ಸ್ವಯಂ ಉದ್ಯೋಗ ಸೇರಿ ಹಲವಾರು ಯೋಜನೆಗಳಿಗೆ ಸೆಪ್ಟೆಂಬರ್ 10ರೊಳಗೆ ಅರ್ಜಿ ಆಹ್ವಾನ; ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಲಭ್ಯ.

  • ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆಗಳಿಗೆ ಅರ್ಜಿ ಆಹ್ವಾನ
  • ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ
  • ಸೆಪ್ಟೆಂಬರ್ 10, 2025 ಕೊನೆಯ ದಿನಾಂಕ

Karnataka Schemes : ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿ ವಿವಿಧ ನಿಗಮಗಳು ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಹಲವಾರು ಆರ್ಥಿಕ ನೆರವು ಹಾಗೂ ಸ್ವಯಂ ಉದ್ಯೋಗ ಯೋಜನೆಗಳನ್ನು ಘೋಷಿಸಿವೆ.

ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ಭೂ ಒಡೆತನ, ಸ್ವಯಂ ಉದ್ಯೋಗ ನೇರಸಾಲ (Direct Loan) ಮತ್ತು ಮೈಕ್ರೋ ಕ್ರೆಡಿಟ್ (ಪ್ರೇರಣಾ) ಸೇರಿದಂತೆ ಹಲವು ಯೋಜನೆಗಳಿಗೆ ಅರ್ಜಿಗಳನ್ನು ಸೆಪ್ಟೆಂಬರ್ 10, 2025ರೊಳಗೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ ಮತ್ತೆ ಮಳೆ ಜೋರು, ನಾಲ್ಕು ದಿನ ಭಾರೀ ಮಳೆ ಮುನ್ಸೂಚನೆ

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳ ಮೂಲಕ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಭೂ ರಹಿತ ಮಹಿಳಾ ಕೃಷಿಕರಿಗೆ ಭೂಮಿ ಖರೀದಿಗೆ (Buy Agriculture Property) ಸಹಾಯ, ಸಣ್ಣ ರೈತರಿಗೆ ಕೊಳವೆ ಬಾವಿ, ಪಂಪ್ ಸೆಟ್ ಹಾಗೂ ವಿದ್ಯುದೀಕರಣ ನೆರವು, ಸಾರಥಿ ಯೋಜನೆಯಡಿ ವಾಹನ ಖರೀದಿಗೆ ಸಹಾಯಧನ, ಹೈನುಗಾರಿಕೆ ಹಾಗೂ ಸಣ್ಣ ವ್ಯಾಪಾರಗಳಿಗೆ ಸಾಲ (Business Loan) ನೀಡಲಾಗುತ್ತದೆ.

Borewell Subsidy

ಸ್ವಾವಲಂಬಿ ಸಾರಥಿ ಯೋಜನೆಯಡಿ ಗರಿಷ್ಠ ₹4 ಲಕ್ಷ ಸಹಾಯಧನ ಲಭ್ಯವಿದ್ದು, ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ₹50,000 ಸಹಾಯಧನ ಹಾಗೂ ವಾರ್ಷಿಕ 4% ಬಡ್ಡಿದರದಲ್ಲಿ ₹50,000 ಸಾಲ ಲಭ್ಯ. ಪ್ರೇರಣಾ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ₹2.50 ಲಕ್ಷ ವರೆಗೆ ಆರ್ಥಿಕ ನೆರವು ಸಿಗಲಿದೆ.

ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಪರಿಶೀಲನೆ ಶುರು! 12.69 ಲಕ್ಷ ಪಡಿತರ ಚೀಟಿಗಳ ವಿರುದ್ಧ ಕ್ರಮ

ಅರ್ಜಿ ಸಲ್ಲಿಸಲು, ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in) ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು. ಅಗತ್ಯ ದಾಖಲೆಗಳಲ್ಲಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಸಂಬಂಧಿತ ಯೋಜನೆಗಳಿಗೆ ಬೇಕಾದ ವಿಶೇಷ ಪ್ರಮಾಣ ಪತ್ರಗಳು ಸೇರಿವೆ.

ಅರ್ಹ ಅಭ್ಯರ್ಥಿಗಳು 18 ರಿಂದ 60 ವರ್ಷ ವಯಸ್ಸಿನವರಾಗಿರಬೇಕು, ಕಳೆದ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು ಹಾಗೂ ಈ ಮೊದಲು ಈ ನಿಗಮಗಳಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಹೆಚ್ಚಿನ ಮಾಹಿತಿಗಾಗಿ 24/7 ಸಹಾಯವಾಣಿ ಸಂಖ್ಯೆ 9482300400ನ್ನು ಸಂಪರ್ಕಿಸಬಹುದು.

Applications Open for Karnataka Schemes

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories