ಟ್ಯಾಕ್ಸಿ ವಾಹನ ಖರೀದಿಗೆ ₹3 ಲಕ್ಷ ನೆರವು! ಕರ್ನಾಟಕ ಸಾರಥಿ ಯೋಜನೆ ಬಗ್ಗೆ ಗೊತ್ತಾ

ದೇವರಾಜ ಅರಸು ನಿಗಮದಿಂದ ಟ್ಯಾಕ್ಸಿ/ಸರಕು ಸಾಗಣೆ ವಾಹನ ಖರೀದಿಗೆ ಶೇ.50 ರಷ್ಟು ಅಥವಾ ₹3 ಲಕ್ಷವರೆಗೆ ಸಹಾಯಧನ! ಅರ್ಹ ನಿರುದ್ಯೋಗಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊನೆ ದಿನಾಂಕ: 30 ಜೂನ್.

  • ಶೇ.50 ರಷ್ಟು ಸಹಾಯಧನ ಅಥವಾ ₹3 ಲಕ್ಷವರೆಗೆ ಲಾಭ
  • Swift Dzire, Dost, Auto ಖರೀದಿಗೆ ಅವಕಾಶ
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30 ಜೂನ್ 2025

ನಿರುದ್ಯೋಗಿ ಯುವಕರಿಗೆ ತಾವು ಇಚ್ಛಿಸಿದ ಟ್ಯಾಕ್ಸಿ ಅಥವಾ ಸರಕು ಸಾಗಣೆ ವಾಹನ ಖರೀದಿಸಲು ಸರ್ಕಾರವು ಸಾಕಷ್ಟು ಬೃಹತ್ ನೆರವು ನೀಡುತ್ತಿದೆ. ದೇವರಾಜ ಅರಸು ನಿಗಮವು ಈ ವರ್ಷವೂ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಯನ್ನು ಮುಂದುವರೆಸಿದ್ದು, ಅರ್ಹ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಉದ್ಯೋಗವಕಾಶ ಕಲ್ಪಿಸಲು ಮುಂದಾಗಿದೆ.

ಈ ಯೋಜನೆಯಡಿ Swift Dzire, Tata Ace, Ashok Leyland Dost ಅಥವಾ Bajaj Auto ವಾಹನಗಳನ್ನು ಖರೀದಿಸಲು ಶೇ.50% ಅಥವಾ ಗರಿಷ್ಠ ₹3,00,000 ವರೆಗೆ ಸಹಾಯಧನ ಲಭಿಸುತ್ತದೆ.

ಉಳಿದ ಮೊತ್ತಕ್ಕೆ ಸಹಕಾರಿಯ ಬ್ಯಾಂಕ್‌ಗಳಿಂದ ಸಾಲ (bank loan for vehicle purchase) ದೊರೆಯುತ್ತದೆ.

ಇದನ್ನೂ ಓದಿ: ಕರ್ನಾಟಕ ಯುವಕರ ಸ್ವಂತ ಉದ್ಯೋಗಕ್ಕೆ ₹2 ಲಕ್ಷ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಇಚ್ಛಿಸುವವರು ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು. ಮತ್ತು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ಮಿತಿ ₹98,000, ನಗರ ಪ್ರದೇಶದವರಿಗೆ ₹1.2 ಲಕ್ಷ ಎಂದು ನಿಗದಿಯಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಸಕ್ತರು ಸೇವಾ ಸಿಂಧು ಪೋರ್ಟಲ್ (Seva Sindhu portal) ಅಥವಾ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಸೇವಾ ಸಿಂಧು ಪೋರ್ಟಲ್ ಲಿಂಕ್: https://sevasindhu.karnataka.gov.in/Sevasindhu/Kannada

ಇದನ್ನೂ ಓದಿ: ಕರ್ನಾಟಕ ಅರಿವು ಶಿಕ್ಷಣ ಸಾಲ ಯೋಜನೆ, 2% ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ

The government Subsidy Loan for the purchase of taxis and vehicles, Just apply like this

ಅವಶ್ಯಕ ದಾಖಲೆಗಳು:

  1. ಆಧಾರ್ ಕಾರ್ಡ್
  2. ಬ್ಯಾಂಕ್ ಪಾಸ್‌ಬುಕ್
  3. ಡ್ರೈವಿಂಗ್ ಲೈಸೆನ್ಸ್
  4. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  5. ಪೋಟೋ, ರೇಶನ್ ಕಾರ್ಡ್, ಮೊಬೈಲ್ ನಂಬರ್

ಹೆಚ್ಚಿನ ಮಾಹಿತಿಗೆ:

ವೆಬ್‌ಸೈಟ್: https://dbcdc.karnataka.gov.in/
ಸಹಾಯವಾಣಿ ಸಂಖ್ಯೆ: 080-22374832 / 8050770004

Apply for Karnataka Swavalambi Sarathi Scheme

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories