ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ! ಸೈಟ್‌ಗಳಿಗೆ ಎ ಖಾತಾ ನೀಡುವ ಪ್ರಸ್ತಾವನೆ
ಬಿಬಿಎಂಪಿಯಿಂದ ಬಿ ಖಾತಾ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ನೇರವಾಗಿ ಎ ಖಾತಾ ನೀಡುವ ಪ್ರಸ್ತಾವನೆ ಸರ್ಕಾರ ಪರಿಗಣಿಸುತ್ತಿರುವುದು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ.

- ಬಿಬಿಎಂಪಿ ಬಿ ಖಾತಾ ನೀಡುವ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು
- ಅಭಿವೃದ್ಧಿ ಶುಲ್ಕ ಪಾವತಿಸಿ ನೇರ ಎ ಖಾತಾ ನೀಡುವ ಪ್ರಸ್ತಾವನೆ
- ಸಣ್ಣ ಮತ್ತು ದೊಡ್ಡ ಸೈಟ್‌ಗಳಿಗೆ ವಿಭಿನ್ನ ಪ್ರಸ್ತಾವಿತ ಶುಲ್ಕ
ಬೆಂಗಳೂರು (Bengaluru): ಬೆಂಗಳೂರು ನಗರದ ಆಸ್ತಿ ಮಾಲಿಕರಿಗೆ ಸರ್ಕಾರದ ಹೊಸ ಪ್ರಸ್ತಾವನೆಯ ಪ್ರಕಾರ, ಇನ್ನು ಮುಂದೆ ಬಿ ಖಾತಾ ನೀಡದೆ ನೇರವಾಗಿ ಎ ಖಾತಾ (A Khata) ನೀಡುವ ಯೋಚನೆ ನಡೆಯುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಪ್ರಸ್ತುತ ಬಿಬಿಎಂಪಿಯು ಕಟ್ಟಡ ನಿಯಮ ಉಲ್ಲಂಘನೆಯ ಆಧಾರದಲ್ಲಿ ಕೆಲ ಆಸ್ತಿಗಳಿಗೆ ಬಿ ಖಾತಾ ನೀಡುತ್ತಿದ್ದು, ಇಂಥ ಆಸ್ತಿಗಳನ್ನು ಎ ಖಾತೆಗೆ ಪರಿವರ್ತಿಸಲು ಬಾಧ್ಯತಾ ದಂಡ ವಿಧಿಸುತ್ತಿತ್ತು. ಆದರೆ ಈಗ, ನವೀನ ಯೋಜನೆಯಂತೆ ಕಟ್ಟಡದ ಯೋಜನೆ ಅನುಮೋದನೆಯಾಗದಿದ್ದರೂ ಕೂಡ, ಅಭಿವೃದ್ಧಿ ಶುಲ್ಕ (development charge) ಪಾವತಿಸುವ ಮೂಲಕ ನೇರವಾಗಿ ಎ ಖಾತಾ ನೀಡುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ! ಏಪ್ರಿಲ್, ಮೇ ತಿಂಗಳ ಹಣ ಖಾತೆಗೆ: ಲಕ್ಷ್ಮೀ ಹೆಬ್ಬಾಳ್ಕರ್
ಸಣ್ಣ ಪ್ರಮಾಣದ ಸೈಟ್‌ಗಳಿಂದ (Property) ಗೈಡೆನ್ಸ್ ವ್ಯಾಲ್ಯೂನ ಶೇ. 5 ರಷ್ಟು ಮತ್ತು ದೊಡ್ಡ ಸೈಟ್‌ಗಳಿಂದ ಶೇ. 15 ರಷ್ಟು ಮೊತ್ತವನ್ನು ಸರ್ಕಾರ ಸಂಗ್ರಹಿಸಲಿದೆ ಎಂಬ ಪ್ರಸ್ತಾವನೆ ಮುಂದಿಟ್ಟಿದೆ.
ಪ್ರತಿ ವರ್ಷ ಸುಮಾರು 10,000 ಕಟ್ಟಡ ಯೋಜನೆಗಳ ಅನುಮೋದನೆಗಾಗಿ ಅರ್ಜಿಗಳು ಬಿಬಿಎಂಪಿಗೆ ಸಲ್ಲಿಕೆಯಾಗುತ್ತಿದ್ದು, ಅವುಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಬಿ ಖಾತಾ ವ್ಯಾಪ್ತಿಗೆ ಒಳಪಡುತ್ತವೆ ಎಂಬುದು ವರದಿ. ಇದಕ್ಕೆ ಬಡಾವಣೆ ಅಭಿವೃದ್ಧಿಪಡಿಸದಿರುವುದು ಪ್ರಮುಖ ಕಾರಣ ಎನ್ನಲಾಗಿದೆ.
ತುಷಾರ್ ಗಿರಿನಾಥ್ ಮಾಹಿತಿ ನೀಡುವಂತೆ, ಕಟ್ಟಡ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಹೊಸ ಪ್ರಸ್ತಾವನೆ ಬಂದಿದೆ. ಪ್ರಸ್ತಾವನೆ ಜಾರಿಗೆ ಬಂದರೆ ಎಲ್ಲಾ ಕಟ್ಟಡ ನಿರ್ಮಾಣಗಳಿಗೂ ನಿಯಮಬದ್ಧತೆ ಲಭ್ಯವಾಗಲಿದೆ ಮತ್ತು ಭವಿಷ್ಯದಲ್ಲಿ ನಗರ ಅಭಿವೃದ್ಧಿಗೂ ಇದೊಂದು ಪೂರಕ ಹೆಜ್ಜೆಯಾಗಬಹುದು.
ಇದನ್ನೂ ಓದಿ: ಗೃಹಲಕ್ಷ್ಮಿ ಹಣಕ್ಕೆ ಕಾದಿರುವ ಮಹಿಳೆಯರಿಗೆ ಸಿಹಿ ಸುದ್ದಿ! ಸಿಎಂ ಹೊಸ ಸೂಚನೆ
ಆಸ್ತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿಯೇ ಬಿ ಖಾತಾ ನೀಡದೆ ನೇರವಾಗಿ ಎ ಖಾತಾ ನೀಡುವುದು ಉದ್ದೇಶವಾಗಿದೆ. ಅಂದರೆ, ಆರಂಭದಲ್ಲಿಯೇ ಅಭಿವೃದ್ಧಿ ಶುಲ್ಕ ಸಂಗ್ರಹಿಸುವ ಮೂಲಕ ಎ ಖಾತಾ ನೀಡುವುದಾಗಿದೆ. ಇದು ಜಾರಿಗೆ ಬಂದಲ್ಲಿ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ.
BBMP May Scrap B Khata, A Khata Likely for All




