Bengaluru AQI: ಬೆಂಗಳೂರು ವಾಯು ಗುಣಮಟ್ಟ ಸ್ವಲ್ಪ ಚೇತರಿಕೆ, ಆದರೂ ಇನ್ನೂ ಕಳಪೆ ಹಂತದಲ್ಲೇ
Bengaluru Air Quality: ಕೆಲ ತಿಂಗಳ ಬಳಿಕ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಸುಧಾರಿಸಿಕೊಂಡಿದ್ದು, ಇತರೆ ಜಿಲ್ಲೆಗಳಿಗಿಂತ ಸ್ಥಿತಿ ಚೆನ್ನಾಗಿದೆ ಆದರೆ WHO ಮಾನದಂಡದಂತೆ ಇನ್ನೂ ಆರೋಗ್ಯಕ್ಕೆ ಅಪಾಯಕಾರಿಯೇ ಆಗಿದೆ
- ಬೆಂಗಳೂರು ವಾಯು ಗುಣಮಟ್ಟದಲ್ಲಿ ತಾತ್ಕಾಲಿಕ ಸುಧಾರಣೆ
- Air Quality Index 144; ಇನ್ನೂ ಕಳಪೆ ಹಂತದಲ್ಲೇ
- WHO ಮಿತಿಗಿಂತ ಹೆಚ್ಚಿನ ಸೂಕ್ಷ್ಮ ಕಣಗಳು ಆತಂಕಕಾರಿ
Bengaluru Air Quality: ಬೆಂಗಳೂರು ವಾಯು ಗುಣಮಟ್ಟ ಸ್ವಲ್ಪ ಚೇತರಿಕೆ, ಆದರೂ ಇನ್ನೂ ಕಳಪೆ ಹಂತದಲ್ಲೇಕಳೆದ ಕೆಲವು ದಿನಗಳಿಂದ ಆತಂಕ ಮೂಡಿಸಿದ್ದ ಬೆಂಗಳೂರು ವಾಯು ಗುಣಮಟ್ಟ ಇಂದಿನ ಮಟ್ಟಿಗೆ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. ಕೆಲ ವಾರಗಳ ಹಿಂದೆ AQI 200ರ ಗಡಿ ದಾಟಿದ್ದ ನಗರದಲ್ಲಿ, ಈಗ ಅಂಕೆಗಳು ಇಳಿಮುಖವಾಗಿವೆ. ಇತರೆ ಜಿಲ್ಲೆಗಳಿಗಿಂತ ಬೆಂಗಳೂರಿನ ಸ್ಥಿತಿ ಇಂದು ಸ್ವಲ್ಪ ಉತ್ತಮವಾಗಿದೆ.
ಆದರೂ ಆರೋಗ್ಯದ ಅಪಾಯ ತಪ್ಪಿಲ್ಲ
ಇಂದಿನ ಏರ್ ಕ್ವಾಲಿಟಿ ಇಂಡೆಕ್ಸ್ ಸುಮಾರು 144ರ ಮಟ್ಟದಲ್ಲಿದ್ದು, ಇದು ಸಂಪೂರ್ಣ ಸುರಕ್ಷಿತ ಎಂದು ಹೇಳಲಾಗದು. ತಜ್ಞರ ಪ್ರಕಾರ ಗಾಳಿಯಲ್ಲಿ ಇರುವ ಸೂಕ್ಷ್ಮ ಕಣಗಳ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆಯ ಮಿತಿಗಿಂತ ಐದು ಪಟ್ಟು ಹೆಚ್ಚಾಗಿದೆ. ಇದರಿಂದ ಅಸ್ತಮಾ, ಶ್ವಾಸಕೋಶ ಸಮಸ್ಯೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಇನ್ನೂ ಉಳಿದಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ; ರಾಜ್ಯದಲ್ಲಿ ಒಣಹವೆ, ಬೆಂಗಳೂರು ಭಾಗದಲ್ಲಿ 4 ದಿನ ಮಂಜು ಮುಸುಕಿದ ವಾತಾವರಣ
ತಜ್ಞರ ಎಚ್ಚರಿಕೆ ಮತ್ತು ಸಾರ್ವಜನಿಕರಿಗೆ ಸಲಹೆ
ಅಂಕೆಗಳಲ್ಲಿ ಸಣ್ಣ ಇಳಿಕೆ ಕಂಡರೂ, ಇದನ್ನು ದೀರ್ಘಕಾಲದ ಸುಧಾರಣೆ ಎಂದು ಭಾವಿಸಬಾರದು ಎಂದು ತಜ್ಞರು ತಿಳಿಸಿದ್ದಾರೆ. ಹಿರಿಯರು, ಮಕ್ಕಳು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗಡೆ ಸಂಚಾರ ಕಡಿಮೆ ಮಾಡಬೇಕು. ಮಾಸ್ಕ್ ಬಳಕೆ ಮತ್ತು ಆರೋಗ್ಯದ ಮೇಲೆ ಗಮನ ನೀಡುವಂತೆ ಸಲಹೆ ನೀಡಿದ್ದಾರೆ.
ಗಾಳಿಯ ಗುಣಮಟ್ಟದ ಅರ್ಥವೇನು?
- 0–50: ಉತ್ತಮ
- 50–100: ಮಧ್ಯಮ
- 100–150: ಕಳಪೆ
- 150–200: ಅನಾರೋಗ್ಯಕರ
- 200–300: ಗಂಭೀರ
- 300ಕ್ಕಿಂತ ಮೇಲು: ಅಪಾಯಕಾರಿ



